ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು ಮುಸ್ಲಿಂ ಯೂತ್ ಕಮಿಟಿ ವತಿಯಿಂದ ಧ್ವಜಾರೋಹಣ ಮಾಡುವ ಮೂಲಕ ಬಂಡಳ್ಳಿ ಗ್ರಾಮದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರೆಲ್ಲರೂ ಹಾಗೂ ಮುಸ್ಲಿಂ ಮೌಲ್ವಿಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತಕ್ಕೆ ಸ್ವಾತಂತ್ರ್ಯ ತರಲು ತ್ಯಾಗ ಬಲಿದಾನ ಶ್ರಮಪಟ್ಟ ವೀರರನ್ನು ನೆನೆಯುತ್ತಾ ಅವರ ತ್ಯಾಗ ಬಲಿದಾನಗಳ ಬಗ್ಗೆ ಮಾತನಾಡಿದರು ನಂತರ ಗ್ರಾಮಸ್ಥರೆಲ್ಲರೂ ಸಿಹಿ ಹಂಚಿ ಸಂಭ್ರಮಿಸಲಾಯಿತು.ಸಂದರ್ಭದಲ್ಲಿ
ಅಧ್ಯಕ್ಷತೆ ವಹಿಸಿದ್ದರು ಮುಖಂಡರಾದ ಜುಲ್ಫಿಕರ್ ಅಹಮದ್ ಮುಖ್ಯ ಅತಿಥಿ ಡಾ. ನಾಗಲಿಂಗಪ್ಪಚಾರಿ, ಹಾಗೂ ಮುಖಂಡರಾದ ನಿಂಗರಾಜು , ನಾಗಯ್ಯ ,ಚಾಮುಲ್ ನಿರ್ದೇಶಕರು ಶಾಹುಲ್ ಅಹಮದ್, ಮದರಸಾ ಗುರುಗಳು ಹಾಗೂ ಮುಸ್ಲಿಂ ಯೂತ್ ಕಮಿಟಿ ಪದಾಧಿಕಾರಿಗಳು ಗ್ರಾಮಸ್ಥರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್