ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಹೆಸ್ಕಾಂ ಕಛೇರಿಯಲ್ಲಿ ಶಾಖಾಧಿಕಾರಿಗಳಾದ ಶ್ರೀ ಆರ್ ಆರ್ ಲಾಳಸಂಗಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಎಲ್ಲರಿಗೂ 78 ನೇ ಸ್ವಾತಂತ್ರ್ಯದ ಶುಭಾಶಯಗಳನ್ನು ತಿಳಿಸಿ ನಮ್ಮ ಹೆಸ್ಕಾಂ ಕಂಪನಿಯು ಆರ್ಥಿಕವಾಗಿ ನಷ್ಟದಲ್ಲಿದ್ದು ಆದ ಕಾರಣ ಎಲ್ಲರೂ ವಿದ್ಯುತ್ ಬಾಕಿ ವಸೂಲಾತಿ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಮತ್ತು ರೈತರ ಪಂಪ್ ಸೆಟ್ಟ್ ಗಳ ಆರ್ ಆರ್ ನಂಬರಗಳಿಗೆ ಆಧಾರ್ ನಂಬರ್ ಜೋಡಿಸುವ ಕೆಲಸ ಬೇಗನೆ ಮುಗಿಸಬೇಕು ಎಂದು ತಿಳಿಸಿದರು.ಎಲ್ಲಾ ಪವರ್ ಮ್ಯಾನ್ ಹಾಗೂ ಕಿರಿಯ ಪವರ್ ಮ್ಯಾನ್ ಗಳು ತಾವು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಂಪನಿಯಿಂದ ನೀಡಲಾದ ಸೇಫ್ಟಿ ಸಲಕರಣೆಗಳನ್ನು ಉಪಯೋಗಿಸಿಕೊಂಡು ಕೆಲಸ ನಿರ್ವಹಿಸಬೇಕೆಂದು ಹೇಳಿದರು. ನಂತರ ಶ್ರೀ ಸಂತೋಷ್ ಬಣಗೊಂಡೆಯವರು ಮಾತನಾಡಿ ಕೆಲಸ ಮಾಡುವಾಗ ತಡವಾದರೂ ಪರವಾಗಿಲ್ಲ ಲೈನ್ ಕ್ರಾಸಿಂಗ್ ಬಹಳ ಇದ್ದು ಅದಕ್ಕಾಗಿ ಮುಂಜಾಗ್ರತೆ ವಹಿಸಿ ಕೆಲಸ ಮಾಡಬೇಕೆಂದು ಹೇಳಿದರು. ಅದೇ ತೆರನಾಗಿ ಲಚ್ಯಾಣ ಗ್ರಾಮದ ಗ್ರಾಮ ವಿದ್ಯುತ್ ಪ್ರತಿನಿಧಿ ಶ್ರೀ ರಾಜು ನದಾಫ ಮಾತನಾಡಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿ ನಮ್ಮ ಶಾಖೆಯ ಹೆಸರು ಹೆಚ್ಚಿಸೋಣ ಎಂದು ಹೇಳಿದರು. ಶ್ರೀ ಶಾಂತೂ ತೇನ್ಹಳ್ಳಿಯವರು ಮಾತನಾಡಿ ಎಲ್ಲರಿಗೂ ಶುಭಾಷಯಗಳು ತಿಳಿಸಿದರು.ಈ ಸಂದರ್ಭದಲ್ಲಿ ಲಚ್ಯಾಣ ಶಾಖೆಯ ಎಲ್ಲಾ ಪವರ್ ಮ್ಯಾನ್ ಗಳು ಹಾಗೂ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮತ್ತು ಕೆಪಿಟಿಸಿಎಲ್ ಸಿಬ್ಬಂದಿಗಳು ಹಾಜರಿದ್ದರು.
ವರದಿ-ಮನೋಜ್ ನಿಂಬಾಳ