ಮಂಗಳೂರು:ನಗರದ ಟಿ ಎಂ ಏ ಪೈ ಕನ್ವೆನ್ಷನ್ ಹಾಲ್ ನಲ್ಲಿ ಸೈಬರ್ ಅಪರಾಧ ತಡೆಯುವಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ಮಂಗಳೂರು ನಗರ ಪೊಲೀಸ್ ಇಲಾಖೆಯು ಆಯೋಜಿಸಿತ್ತು. ವಾಕಥಾನ್ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ, ದಕ್ಷಿಣ ಕನ್ನಡ ಉಸ್ತುವಾರಿ ಮಂತ್ರಿಯೂ ಆಗಿರುವ ಶ್ರೀ. ದಿನೇಶ್ ಗುಂಡೂರಾವ್ ರವರು ಚಾಲನೆ ನೀಡಿದರು. ತಮ್ಮ ಸಾಂದರ್ಭಿಕ ಭಾಷಣದಲ್ಲಿ ಜನತೆ ಸೈಬರ್ ಕ್ರೈಂ ಬಗ್ಗೆ ಬಹಳ ಜಾಗೃತರಾಗಿರಲು ಕರೆ ನೀಡಿದರು. ಸೈಬರ್ ಕ್ರಿಮಿನಲ್ ಗಳು ವಿಧ ವಿಧವಾಗಿ ಜನರನ್ನು ಮೋಸಗೊಳಿಸುತ್ತಿದ್ದಾರೆ, ಆದುದರಿಂದ ಕರೆಗಳನ್ನು ಸ್ವೀಕರಿಸುವಾಗ ಜಾಗೃತರಾಗಿರಬೇಕು. ಆಪರಿಚಿತರಿಗೆ O.T.P , ಪಾಸ್ ವರ್ಡ್ ಕೊಡಬಾರದು. ಠಾಣೆಗಳಲ್ಲಿ ದಾಖಲಾಗುವ FIR ಗಳಲ್ಲಿ ಶೇಖಡಾ 20 ಸೈಬರ್ ಕ್ರೈಮ್ ನ ಕೇಸುಗಳಾಗಿವೆ, ಆದುದರಿಂದ ಪ್ರಜೆಗಳು ಹೆಚ್ಚಿನ ಜಾಗ್ರತೆ ವಹಿಸುವಂತೆ ಕರೆನೀಡಿದರು. ಕಾರ್ಯಕ್ರಮ ಆಯೋಜಿಸಿದ ಮಂಗಳೂರು ಮಹಾನಗರ ಪೋಲೀಸ್ ಕಮಿಷನರ್ ನ್ನು ಶ್ಲಾಘಿಸಿದರು.
ಕನ್ವೆನ್ಷನ್ ಹಾಲ್ ನಲ್ಲಿ ಜರುಗಿದ ಕಾರ್ಯಾಗಾರದಲ್ಲಿ ಪೋಲಿಸ್ ಕಮಿಷನರ್ ಶ್ರೀ ಆನುಪಮ್ ಆಗರ್ವಾಲ್ ಮುಖ್ಯ ಸಂಪನ್ಮೂಲ ಬಾಷಣ ಮಾಡಿ ಸೈಬರ್ ಕ್ರೈಮ್ ನ ವಿವಿಧ ರೂಪ ಮತ್ತು ಲಕ್ಷಣಗಳ ಬಗ್ಗೆ ಸವಿವರವಾದ ಪಿ.ಪಿ.ಟಿ ಪ್ರೆಸೆಂಟೇಷನ್ ನೀಡಿದರು.ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಪ್ರೊಫಸರ್ ಶ್ರೀ. ಮೋಹಿತ್ ತಹಲಾನಿ ಕೂಡಾ ಉಪಯುಕ್ತ ಮಾಹಿತಿ ನೀಡಿದರು. ಸಭೆಯಲ್ಲಿ ಹಲವಾರು ವಿದ್ಯಾಲಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಹಲವಾರು ಸಾಧಕರನ್ನು ಈ ಸಭೆಯಲ್ಲಿ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಕೊಟ್ಟು ಗೌರವಿಸಲಾಯಿತು.
ಟಿ ಎಂ ಏ ಪೈ ಕನ್ವೆನ್ಷನ್ ಹಾಲ್ ನಿಂದ ನವ ಭಾರತ ವೃತ್ತದ ತನಕ ಬೃಹತ್ ವಾಕಥಾನ್ ಮೆರವಣಿಗೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವರದಿ: ಚಂದ್ರಶೇಖರ ಹೆಬ್ಬಾರ್ ಕೊಲ್ಯ