ಶಿವಮೊಗ್ಗ, ಆ.15:ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ಅರ್ಥಪೂರ್ಣ ವಾಗಿ ನಡೆಯಿತು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸುತ್ತಲಿನ ರಸ್ತೆಗಳಲ್ಲಿ ಜಾಥ ನಡೆಸಿ, ದೇಶದ ಎಲ್ಲಾ ವೀರ ಪುರುಷರ ಹೆಸರು ಗಳನ್ನು ಕೂಗುತ್ತಾ ದೇಶ ಭಕ್ತಿ ಬಿಂಬಿಸಿದರು.
ಧ್ವಜಾರೋಹಣವನ್ನು 32 ವರ್ಷ ದೇಶ ಸೇವೆ ಮಾಡಿದ, ಸೈನ್ಯದಲ್ಲಿ ಸೇವೆ ಸಲ್ಲಿಸಿದ ಸುಬೇದಾರ್ ಮೇಜರ್ ಮತ್ತು ಹಾನರರಿ ಕ್ಯಾಪ್ಟನ್ ವಿಜಯ್ ಕೆ.ಟಿ ಇವರು ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಡಾ.ಡಿ.ಆರ್. ನಾಗೇಶ್ ವಹಿಸಿ ಕಾರ್ಯದರ್ಶಿ ಶೋಭಾ ವೆಂಕಟರಮಣ, ಮುಖ್ಯ ಶಿಕ್ಷಕರಾದ ತೀರ್ಥೆಶ್, ಗಜೇಂದ್ರನಾಥ್ ಟಿವಿ ಮತ್ತು ಶಿಕ್ಷಕರು ಮಕ್ಕಳು, ಪೋಷಕರು ಉಪಸ್ಥಿತರಿದ್ದರು.
ಮಕ್ಕಳು ಅನೇಕ ನೃತ್ಯ, ನಾಟಕ ಮತ್ತು ಭಾಷಣಗಳ ಮೂಲಕ ಒಮ್ಮೆ ನಮ್ಮ ಗತ ವೈಭವವನ್ನು ನೆನಪಿಗೆ ತಂದು ಕೊಟ್ಟರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ