ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ದೇವರ ಮನೆ ಲೇ ಔಟ್ ಬಡಾವಣೆಯಲ್ಲಿರುವ ಅಪ್ಪಾಜಿ ಚಾರಿಟೇಬಲ್ ಟ್ರಸ್ಟ್ ಇದರ ಅಡಿಯಲ್ಲಿ ನಡೆಯುತ್ತಿರುವ ಅಪ್ಪಾಜಿ ಪಬ್ಲಿಕ್ ಶಾಲೆ ಜೇವರ್ಗಿಯಲ್ಲಿ ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಪಾಲಕ/ಪೋಷಕರಿಗೆ ಅವರ ಮಕ್ಕಳಿಂದ ಪಾದ ಪೂಜೆಯನ್ನು ೭೮ ನೇಯ ಸ್ವಾತಂತ್ರ್ಯ ದಿವಸದಂದು ಸಂಸ್ಥೆಯ ಅಧ್ಯಕ್ಷರಾದ ಎಮ್ ಎಸ್ ಹಿರೇಮಠ,ಚಂದ್ರಕಲಾ ದೊಡಮನಿ,ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರೆಲ್ಲರೂ ಅರ್ಥಪೂರ್ಣವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿರುವ ಶ್ರೀ ಷ.ಬ್ರ. ಡಾಃ ಗುರುಮೂರ್ತಿ ಶಿವಾಚಾರ್ಯರು ಸುಕ್ಷೇತ್ರ ಪಾಳ ರವರು ವಹಿಸಿಕೊಂಡಿದ್ದರು.
೭೮ ನೇ ಕಾರ್ಯಕ್ರಮದ ಜೊತೆಗೆ ತಂದೆ-ತಾಯಿಯರಿಗೆ ಅವರ ಮಕ್ಕಳಿಗೆ ಪಾದ ಪೂಜೆ ಕಾರ್ಯಕ್ರಮವನ್ನು ವಹಿಸಿಕೊಂಡಿರುವುದರಿಂದ ಶಿಕ್ಷಣ ಮತ್ತು ಸಂಸ್ಕಾರ ಒಂದೇ ನಾಣ್ಯದ ರೂಪವಾಗಿ ಮೂಡಿ ಬಂದಿವೆ.
ಇದೇ ಸಂದರ್ಭದಲ್ಲಿ ಪಾಲಕರಿಗೆ ತಮ್ಮ ಮಕ್ಕಳ ಪಾದ ಪೂಜೆ ಕಾರ್ಯಕ್ರಮವನ್ನು ಏರ್ಪಡಿಸಿ ಪ್ರತಿ ನಿತ್ಯ ಪಾದ ಪೂಜೆ ಸಂಸ್ಕಾರ ವಿದ್ಯ ಕಲಿಸಿಕೊಡಿ ಎಂದು ತಮ್ಮ ಆಶಿರ್ವಚನಕ್ಕೆ ವಿರಾಮ ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಸಂಜೀವಕುಮಾರ ಗಂವ್ಹಾರ ಮತ್ತು ಸಿದ್ದು ಅಂಕುಶ್ ದೊಡ್ಡಿಯವರು ಕೂಡಾ ತಂದೆ ತಾಯಿ ಆದವರು ಮಕ್ಕಳ ಉಜ್ವಲ್ ಭವಿಷಕ್ಕಾಗಿ ಬಡತನ- ಸಿರಿತನ,ಸಾಧಕರ ಸಾಧನೆಯ ಬಗ್ಗೆ ತಿಳಿಹೇಳಿ ಮತ್ತು ಬೇಡಿದೆಲ್ಲವನ್ನೂ ನಾಜುಕಾಗಿ ಈಡೆರಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಪ್ಪಾಜಿ ಟ್ರಸ್ಟ(ರಿ.) ಅಧ್ಯಕ್ಷರಾದ ಎಮ್ ಎಸ್ ಹಿರೇಮಠ ರವರು ಧಾರವಾಡ ಜಿಲ್ಲೆ ತೊರೆದು ಇಲ್ಲಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡುವುದು ಮತ್ತು ಕಲಿಕಾ ನ್ಯೂನ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಗುರುತಿಸಿ ದೇಶದ ಸತ್ ಪ್ರಜೆಯನ್ನಾಗಿ ಮಾಡುವುದೇ ನನ್ನ ಸೇವೆ ಎಂದು ಮನದಾಳದ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಘನ ಉಪಸ್ಥಿತರಾಗಿ ತಾಲೂಕು ವೈದ್ಯಾಧಿಕಾರಿಗಳಾದ ಡಾಃ ಸಿದ್ದು ಪಾಟೀಲ್,ಸಂಜೀವಕುಮಾರ ಜೋಶಿ,ಸಿದ್ದು ಅಂಕುಶ್ ದೊಡ್ಡಿ,ಚಂದ್ರಶೇಖರ ಪಾಟೀಲ್,ಎಮ್ ಎಸ್ ಹಿರೇಮಠ,ಚಂದ್ರಕಲಾ ದೊಡಮನಿ,ಮಂಜುಳಾ ಆಯ್ ಇಜೇರಿ ಹಾಗೂ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದ ವಂದಿಸಿದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್(ಜೇವರ್ಗಿ)