ಗದಗ ಜಿಲ್ಲಾ ರೋಣ ತಾಲೂಕ ಬೆಳವಣಿಕಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದ ರೈತರು ಹೆಸರು ಬೆಳೆಯನ್ನು ಸ್ವಚ್ಛ ಮಾಡಲು ಹಾಕಲಾಗಿದ್ದ ಬಿಸಿಲಿಗೆ ಒಣಗಲು ಕಣದಲ್ಲಿ ಹಾಕಿದ್ದರು. ಆದರೆ ಮಳೆಗೆ ಸಿಲುಕಿ ಹೆಸರು ಕಾಳು ನೀರಲ್ಲಿ ನೆನೆದು ಮೊಳಕೆ ಬಂದಿದ್ದಾವೆ ಎಂದು ರೈತರು ಅಳಲನ್ನು ತೋಡಿಕೊಂಡರು.
ರೈತರು ಸಕಾಲಕ್ಕೆ ಸರಿಯಾಗಿ ಮಳೆಯಾಗದೇ ಅಲ್ಪಸ್ವಲ್ಪ ಮಳೆಯಿಂದ ಹೆಸರು ಬೆಳೆದಿದ್ದರು ಆದರೆ ಮಳೆಗೆ ಸಿಲುಕಿ ರೈತರ ಹೆಸರು ಮೊಳಕೆ ಬಂದು ವಾಸನೆ ಬಂದು ಕಪ್ಪಾಗಿದ್ದಾವೆ. ರೈತರಾದ ಮುತ್ತಣ್ಣ ಶಿರೋಳ ಒಂದು ಎಕರೆಗೆ ಹೆಸರು ಬಿತ್ತನೆ ಮಾಡಲು ಸುಮಾರು ಹತ್ತು ಸಾವಿರದಷ್ಟು ಖರ್ಚು ಮಾಡಿದ್ದೇವೆ ಎಂದು ಹೇಳಿದರು ಆದರೆ ಮಳೆಯಿಂದ ಹೆಸರು ಬೇಳೆಯು ನೀರು ಪಾಲಾಗಿದ್ದಾವೆ ಎಂದು ರೈತರು ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.ಬಿತ್ತನೆ ಸಮಯದಲ್ಲಿ ಹೆಸರು ಬೆಳೆಗೆ ಕ್ವಿಂಟಾಲಿಗೆ 13 ಸಾವಿರ ಇದ್ದ ಬೆಲೆ ಸಧ್ಯ ಮಾರುಕಟ್ಟೆಯಲ್ಲಿ ರೈತರ ತಂದ ಬೆಳೆಗೆ ಕೇವಲ 4 ರಿಂದ 5 ಸಾವಿರ ಮಾರುತ್ತಿದ್ದು ರೈತರು ಸಂಕಟ ಪಡುತ್ತಿದ್ದಾರೆ ಸರಕಾರ ರೈತರಿಗಾಗಿ ಹೆಸರು ಬೆಳೆಗೆ ಬೆಂಬಲ ಬೆಲೆಯನ್ನು ಕೂಡಾ ಇನ್ನೂ ಪ್ರಾರಂಭ ಮಾಡುತ್ತಿಲ್ಲ ಎಂದು ರೈತರಾದ ಮಲ್ಲಣ್ಣ ದಾದ್ಮಿ, ಈಶಪ್ಪ ಹೊಸಂಗಡಿ, ಶಿವಾನಂದ ಅಳಗವಾಡಿ, ರಾಜು ತಾಳಿ, ಲಚ್ಚಪ್ಪ ಚಿಕ್ಕರಡ್ಡಿ, ನಾರಾಯಣ ಕುರ್ಲಗೇರಿ, ಲೊಕೇಶ ಜಗಾಪೂರ, ಯಮನೂರಪ್ಪ ತಾಳಿ, ಬಸವರಾಜ ಜಕನೂರ, ನಾಗಪ್ಪ ಮಾಡಳ್ಳಿ, ಧರ್ಮಣ್ಣ ಮಾಡಳ್ಳಿ, ಈರಪ್ಪ ಕರ್ಕಿಕಟ್ಟಿ, ಬಸವರಾಜ ಹೆಬ್ಬಳ್ಳಿ, ಶರಣಪ್ಪ ಶಿರೋಳ, ಶಶಿಕಾಂತ ತೊಗುಣಶಿ, ಮಂಜುನಾಥ ಸಜ್ಜನ, ಶಂಕ್ರಪ್ಪ ಶಗಣಿ, ಶಿದ್ದಲಿಂಗೇಶ ಮೆಣಸಿನಕಾಯಿ, ಪ್ರವೀಣ ಹಕ್ಕಾಪಕ್ಕಿ, ಅಜೀತ ನಾಗನೂರ, ಮುದಕಪ್ಪ ಮೇದಾರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಸರಕಾರ ಕೂಡಲೇ ಬೆಂಬಲ ಬೆಲೆಯನ್ನು ಪ್ರಾರಂಭ ಮಾಡಿ ಹೆಸರ ಕಾಳನ್ನು ಖರೀದಿ ಮಾಡಬೇಕೆಂದು ಆಗ್ರಹಿಸಿದರು.
ವರದಿ-ನಿಂಗರಾಜ ತಾಳಿ