ರಾಯಚೂರು ಜಿಲ್ಲೆಯ ಸಿಂಧನೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ನೆಡೆಸಲು ದೇವಸ್ಥಾನದ ವಾಸ್ತು ನೋಡಲು ಹಗರಿಬೊಮ್ಮನಹಳ್ಳಿ ಹಡಗಲಿಯ ಶಿಲಾ ಶಿಲ್ಪಿ ಹಾಗೂ ದೇವಾಲಯ ವಾಸ್ತು ಶಿಲ್ಪಿಗಳಾದ ಶ್ರೀ ಮೌನೇಶ್ವರ ಗುರುಗಳು ಇಂದು ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿನ ವಾಸ್ತವ ವಾತಾವರಣ ನೋಡಿದರು. ನಂತರ ದೇವಸ್ಥಾನ ಕಟ್ಟಡ ನಿರ್ಮಾಣದ ಬಗ್ಗೆ ಸಮಾಜದ ಮುಖಂಡರ ಬಳಿ ಸುದೀರ್ಘವಾಗಿ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮುಂದಿನ ಬೆಳವಣಿಗೆ ಬಗ್ಗೆ ಮುಂದಿನ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು. ಅಧ್ಯಕ್ಷರು ,ಉಪಾದ್ಯಕ್ಷರುಗಳು ತಾಲೂಕ ಮುಖಂಡರುಗಳು, ಸಮಾಜದ ಬಂದುಗಳು ಕಡ್ಡಾಯವಾಗಿ ತಮ್ಮ ಕೆಲಸಕಾರ್ಯಗಳನ್ನು ಬದಿಗೊತ್ತಿ ತಪ್ಪದೇ ಹಾಜರಾಗಬೇಕೆಂದು ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ ಬಡಿಗೇರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರ್ಚಕರಾದ ನರಸಪ್ಪ,ಉಪಾದ್ಯಕ್ಷರಾದ ಷಣ್ಮುಖಪ್ಪ ಪತ್ತಾರ,ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ ಬಡಿಗೇರ, ಪ್ರಧಾನ ಕಾರ್ಯದರ್ಶಿ ಬಸವರಾಜ ಪತ್ತಾರ ಕಮತಗಿ,ತಾಲೂಕ ವಿಶ್ವಕರ್ಮ ಸಮಾಜದ ಖಜಾಂಚಿಗಳಾದ ಗಣೇಶ ಪತ್ತಾರ ಸುಕಲಪೇಟೆ, ಸಮಾಜದ ಮುಖಂಡರಾದ ಉಪೇಂದ್ರ ಆಚಾರಿ,ದೇವರಾಜ ಪತ್ತಾರ ಎಲೆಕೂಡ್ಲಿಗಿ,ಶಿವು ಬಡಿಗೇರ,ವೀರೇಶ ಕೊಟ್ನೆಕಲ್, ಸಂದೀಪ್ ಕುಮಾರ ಇನ್ನಿತರರು ಉಪಸ್ಥಿತರಿದ್ದರು.