ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಠಿಣ ಪರಿಶ್ರಮದಿಂದ ಉಜ್ವಲ ಭವಿಷ್ಯ ಮತ್ತು ಉನ್ನತ ಜೀವನ ಸಾಧ್ಯ :ಡಾ.ಗಣಪತಿ ಲಮಾಣಿ

ಕಠಿಣ ಪರಿಶ್ರಮದಿಂದ ಉಜ್ವಲ ಭವಿಷ್ಯ ಮತ್ತು ಉನ್ನತ ಜೀವನ ಸಾಧ್ಯ ಎಂದು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಹೇಳಿದರು.

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜಿನಲ್ಲಿ ಶನಿವಾರದಂದು ವಿಜ್ಞಾನ ವಿಭಾಗದಿಂದ ಹಮ್ಮಿಕೊಂಡಿದ್ದ ಸೈನ್ಸ್ ಪಾರ್ಟಿ-2023-24 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮುಂದೆ ನೀವು ಉನ್ನತ ಶಿಕ್ಷಣ ಪಡೆಯಿರಿ. ಮಹಿಳಾಯಾರಿಗೆ ಉಚಿತ ಹಾಸ್ಟೆಲ್, ಶಿಷ್ಯ ವೇತನ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಿ. ಸ್ಪರ್ಧೆತ್ಮಕ ಪರೀಕ್ಷೆಗಳನ್ನು ಬರೆಯಿರಿ. ಸರಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೋರ್ಸ್ ಗಳು ಪ್ರಾರಂಭ ಆಗುತ್ತಿವೆ ಎಂದರು.

ಕಾಲೇಜಿನ ರಾಜ್ಯ ಶಾಸ್ತ್ರ ದ ಸಹ ಪ್ರಾಧ್ಯಪಕರಾದ ಡಾ. ಗವಿಸಿದ್ದಪ್ಪ ಅವರು ಮಾತನಾಡಿ ವೈಜ್ಞಾನಿಕ ಜೀವನವನ್ನು ಅಳವಡಿಸಿಕೊಳ್ಳಬೇಕು. ಸಂವಿಧಾನ ಮೂಲಭೂತ ಹಕ್ಕುಗಳನನ್ನು ಪಡೆದುಕೊಳ್ಳಬೇಕು. ಸತ್ಯ ದಿಂದ ಜೀವನ ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಹೇಳಿದರು.

ಕಾಲೇಜಿನ ವಾಣಿಜ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಮತ್ತು ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ವಿಠೋಬ ಅವರು ಮಾತನಾಡುತ್ತಾ ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಅಭಿವೃದ್ಧಿ ಹೊಂದುತ್ತಿದೆ. ಇಂದು ವಿಜ್ಞಾನ ನಮ್ಮ ಜೀವನದ ಒಂದು ಭಾಗವಾಗಿದೆ. ಈ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಬಹಳ ಮುಖ್ಯ, ಅಗತ್ಯ ಮತ್ತು ಅವಶ್ಯಕಾವಾಗಿದೆ ಎಂದು ಹೇಳಿದರು.

ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಶ್ರೀ ಮತಿ ನಾಗರತ್ನ ತಮ್ಮಿನಾಳ ಅವರು ಮಾತನಾಡುತ್ತ ನಮ್ಮ ದೇಶದಲ್ಲಿ ಎಲ್ಲಾ ಸಂಪತ್ತು ಇದೆ. ಅವುಗಳನ್ನು ನಾವು ಉಪಯೋಗಿಸಕೊಳ್ಳಬೇಕು. ಮಹಿಳೆಯರು ಒಂದೇ ಸಮಯದಲ್ಲಿ ಬಹು ಕೆಲಸಗಳನ್ನು ಮಾಡುತ್ತಾರೆ.
ಉನ್ನತ ಸಂಶೋಧನೆ ಮಾಡಿ ಎಂದರು.

ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಕಾಲೇಜಿನ ದೈಹಿಕ ಶಿಕ್ಷಣ ಬೋಧಕರಾದ ಡಾ.ಪ್ರದೀಪ್ ಕುಮಾರ್ ಅವರು ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ 2020 ರಲ್ಲಿ ವಿಜ್ಞಾನ ವಿಭಾಗ ಪ್ರಾರಂಭ ಆಯಿತು. ನಮ್ಮ ಸರಕಾರಿ ಕಾಲೇಜಿನಲ್ಲಿ ಫೀ ಕಡಿಮೆ ಇರುತ್ತದೆ. ಇಲ್ಲಿ ಕಡಿಮೆ ಸೌಲಭ್ಯಗಳಲ್ಲಿ ವಿಧ್ಯಾಭ್ಯಾಸ ಮಾಡಿದ್ದೀರಿ. ಆದರೆ ಇಂದು ಸರಕಾರದಿಂದ ಪ್ರಯೋಗಾಲಯಗಳು ಬರುತ್ತಿವೆ. ನೀವು ಮುಂದೆ ಚನ್ನಾಗಿ ಓದಿ. ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಿರಿ. ಸತತವಾಗಿ ಪ್ರಯತ್ನ ಮಾಡಿ ಎಂದರು.

ಕಾಲೇಜಿನ ಗ್ರಂಥಾಪಾಲಕರಾದ ಡಾ. ಮಲ್ಲಿಕಾರ್ಜುನ ಅವರು ಮಾತನಾಡುತ್ತ ಇಂದು ಸ್ಪರ್ಧೆ ಹೆಚ್ಚು ಇದೆ. ಚೆನ್ನಾಗಿ ಓದಿ ಇದರಲ್ಲಿ ನೀವು ಯಶಸ್ವಿ ಆಗಿ. ನೀವು ಹೆಚ್ಚಿನ ಪುಸ್ತಕಗಳನ್ನು ಓದಿ. ಇವುಗಳಿಂದ ನಿಮಗೆ ಹೆಚ್ಚು ಜ್ಞಾನ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಅಶೋಕ ಕುಮಾರ್ ಅವರು ಮಾತನಾಡುತ್ತ ಜ್ಞಾನ ಎನ್ನುವುದು ಸಮುದ್ರಕ್ಕಿಂತ ವಿಶಾಲವಾದದ್ದು. ನೀವು ಸಂಶೋಧನೆ ಮಾಡಿ. ದೆಹಲಿ ಯಂತಹ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ವಿಧ್ಯಾಭ್ಯಾಸ ಮಾಡಿ ಎಂದರು.

ವಿಜ್ಞಾನ ವಿಭಾಗದ ಉಪನ್ಯಾಸಕರಾದ ಆಶಾ ಅವರು ಮಾತನಾಡುತ್ತ ನೀವು ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ನೀವು ತಂದೆ ತಾಯಿಯಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಿ. ಉನ್ನತ ಸ್ಥಾನಕ್ಕೇರಿದ ಮಹಿಳೆಯರ ಗುಣಗಳನ್ನು ಅಳವಡಿಸಿಕೊಳ್ಳಿ. ಮನೆಯಲ್ಲಿ ತಂದೆ ತಾಯಿಗಳ ಮಾತನ್ನು ಕೇಳಿ. ನಿಮ್ಮಲ್ಲಿರುವ ಜ್ಞಾನವನ್ನು ಉನ್ನತ ಶಿಕ್ಷಣಕ್ಕೆ ಬಳಸಿಕೊಳ್ಳಿ
ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ಉಪನ್ಯಾಸಕರಾದ ಮಂಜುಳಾ ಅವರು ಮಾತನಾಡುತ್ತಾ ನಾವು ಪ್ರತಿ ದಿನ ತರಗತಿಗಳಲ್ಲಿ ಒಳ್ಳೆಯ ವಿಷಯಗಳನ್ನು ಹೇಳುತ್ತಿರುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನ ಸುಖಕರವಾಗಲಿ. ನಿಮ್ಮಲ್ಲಿ ಉತ್ತಮವಾದ ಆಸಕ್ತಿ ಇದೆ. ನಿಮಗೆ ಸಮಯ ಪ್ರಜ್ಞೆ ಇರಬೇಕು. ಸೌಲಭ್ಯಗಳು ಕಡಿಮೆ ಇದ್ದ ಕಡೆ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಹುಲಿಗೆಮ್ಮ, ಸುಮಿತ್ರಾ, ಡಾ.ನರಸಿಂಹ, ಬಸವರಾಜ, ಯಶೋಧ, ಪಲ್ಲವಿ, ಆಶಾ, ಮಂಜುಳ, ಸುಷ್ಮಾ ದೇಶಪಾಂಡೆ, ಹನುಮವ್ವ, ಶ್ರೀರಾಮ್, ಎಚ್. ಜಿ. ಬೊಮ್ಮನಾಳ ಇದ್ದರು.
ಲಲಿತಾ ವಂದಿಸಿದರು. ಭೂಮಿಕಾ, ಸುನಿತಾ ನಿರೂಪಿಸಿದರು. ರೇಖಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಿಲ್ಪಾ ಸ್ವಾಗತಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ