ಕಲಬುರಗಿ:ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಇರುವ ಈ ನಿಸ್ವಾರ್ಥಿಯ ಸಮಾಜದ ಸೇವಕನಿಗೆ ಸಮಾಜದ ಸೇವೆಯಲ್ಲಿ ಗುರುತಿಸಿ ಅವರಿಗೆ ಉತ್ತರ ಪ್ರದೇಶದ ದ ಫೇರ್ ವಿಜನ್ ಫೌಂಡೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಸಮಾಜ ಸೇವೆಯನ್ನು ಗುರುತಿಸಿ ದ ಫೇರ್ ವಿಜನ್ ಫೌಂಡೇಶನ್ ವತಿಯಿಂದ ‘ಸ್ವತಂತ್ರ ನಾಯಕ ಸಮ್ಮಾನ್ ಪ್ರಶಸ್ತಿಯ ಸರ್ಟಿಫಿಕೇಟ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಪ್ರಶಸ್ತಿ ನೀಡಿದ ಮೇಲೆ ನನಗೆ ಹೆಚ್ಚಿನ ಜವಾಬ್ದಾರಿಗಳು ಬಂದಂತಾಗಿದೆ. ಒಟ್ಟು ಇಲ್ಲಿಯವರೆಗೆ 13 ಕಡೆಯಲ್ಲೂ ಈ ರೀತಿಯ ವಿಭಿನ್ನವಾಗಿ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ಮತ್ತು ಒಟ್ಟು 1350 ಕ್ಕೊ ಹೆಚ್ಚು ಅನಾಥರಿಗೆ (ಉಚಿತವಾಗಿ ) ಕ್ಷೌರ ಸೇವೆ ಸಲ್ಲಿಸಿದ್ದಾರೆ ಮತ್ತು ಸಮಾಜದ ಸಂಘಟನೆ ಜೊತೆಯಲ್ಲಿ ತನ್ನಿಂದಾಗುವ ಸಹಾಯವನ್ನು ಮಾಡುತ್ತಾರೆ ಹಾಗಾಗಿ ಇದೇ 2024 ರ ಸಾಲಿನ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ‘ ಈ ನಿಸ್ವಾರ್ಥಿಯ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಸೇವಕನಿಗೆ ಸ್ವಾತಂತ್ರ್ಯ ನಾಯಕ ಸಮ್ಮಾನ್ ಸರ್ಟಿಫಿಕೇಟ್ ಪ್ರಶಸ್ತಿ ನೀಡಿದ್ದಕ್ಕಾಗಿ ನಮ್ಮ ಭಾರತಕ್ಕಾಗಿ ಸದಾ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.
