ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಪ್ರದಾನ ಅಂಚೆ ಕಚೇರಿ ಮುಂಭಾಗ ವಾಣಿಜ್ಯ ಮಳಿಗೆ ನಿರ್ಮಿಸಲು ಐತಿಹಾಸಿಕ ಕೋಟೆಗೆ ಲಗತ್ತಾಗಿ ಸುಮಾರು ಹತ್ತನ್ನೆರಡು ಆಳವಾಗಿ ಜೆ ಸಿ ಬಿ ಯಿಂದ ಮಣ್ಣು ತೆಗೆಯುವಾಗ ಐತಿಹಾಸಿಕ ಕೋಟೆ ಕಟ್ಟಲು ಅಂದಿನ ಪಾಳೆಗಾರರು ಕೋಟೆಯ ತಳಪಾಯಕ್ಕೆ ಉಪಯೋಗಿಸಲಗಿದ್ದ ಬೃಹತ್ ಗಾತ್ರದ ಕಲ್ಲು ಗಲು ಕಿತ್ತಿರುವ ಪರಿಣಾಮವೇ ಇಂದು ಕೋಟೆ ಗೋಡೆ ಕುಸಿಯಲು ಕಾರಣವಾಗಿರುವ ಕೋಟೆ ಕಲ್ಲುಗಳು ಇಂದು ಪಟ್ಟಣದ ಉತ್ತರ ಪಿನಾಕಿನಿ ಬಡಾವಣೆಯ ಜಯಂತಿ ಶ್ರೀನಾಥ್ ರವರ ಸರ್ವೆ ನಂಬರ್ 337 /2ರಲ್ಲಿ ಪತ್ತೆಯಾಗಿವೆ.ಇತ್ತೀಚಿಗೆ ಪಟ್ಟಣದ ಕೋಟೆ ಗೋಡೆ ಕುಸಿತ ವಿವಾದ ಹಿನ್ನಲೆ ಸೋಮವಾರ ಪ್ರತಿಭಟನೆ ನಡೆದು ಸ್ಥಳಕ್ಕಾಗಮಿಸಿದ್ದ ತಹಸೀಲ್ದಾರ್ ಕೋಟೆ ಗೋಡೆ ಕುಸಿತ ಪ್ರಕರಣಕ್ಕೆ ಕಾನೂನು ರೀತ್ಯಾ ಕ್ರಮ ವಹಿಸುವ ಭರವಸೆ ನೀಡಿದ ಹಿನ್ನಲೆ ಪ್ರತಿಭಟನೆ ಅಂತ್ಯವಾದ ಬೆನ್ನಲ್ಲೆ ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದ ಜಯಂತಿ ಶ್ರೀನಾಥ್ ರವರಿಗೆ ಸೇರಿದ ಜಮೀನಿನಲ್ಲಿ ಕೋಟೆಗೆ ಸಂಬಂದಿಸಿದ ಸುಮಾರು 20 ಲೋಡಿನಷ್ಟು ದೊಡ್ಡ ದೊಡ್ಡ ಗಾತ್ರದ ಕೋಟೆ ಕಲ್ಲುಗಳು ಹಾಗೂ ಒಂದು ನೂರಕ್ಕೂ ಹೆಚ್ಚು ಲೋಡಿನಷ್ಟು ಮಣ್ಣನ್ನು ಹೊರತೆಗೆದು ಅಕ್ರಮವಾಗಿ ಸಾಗಿಸಲಾಗಿರುವ ಪ್ರಕರಣ ಬಯಲಿಗೆ ಬಂದಿದೆ.
ಸದರಿ ಸ್ಥಳಕ್ಕಾಗಮಿಸಿದ ಪತ್ರಕರ್ತರೊಂದಿಗೆ ಮಾತನಾಡಿದ ಕಣ್ಣಮೆಡಿ ಕೃಷ್ಣ ಮೂರ್ತಿ ಕೋಟೆ ಗೋಡೆ ಕುಸಿಯಲು ಜಯಂತಿ ಶ್ರೀನಾಥ್ ರವರು ಸೆಲ್ಲರ್ ನಿರ್ಮಾಣಕ್ಕೆ ಅನುಮತಿಯಿಲ್ಲದೇ ವಾಣಿಜ್ಯ ಮಳಿಗೆ ನಿರ್ಮಿಸಲು ಕೋಟೆಯ ಅಡಿಪಾಯಕ್ಕೆ ಉಪಯೋಗಿಸಿದ್ದ ಬೃಹತ್ ಗಾತ್ರದ ಕೋಟೆ ಕಲ್ಲುಗಳನ್ನು ಕಿತ್ತಿದ ಪರಿಣಾಮ ಕೋಟೆ ಗೋಡೆ ಕುಸಿಯಲು ಕಾರಣವಾಗಿರುವುದಲ್ಲದೆ ಸದರಿ ಕೋಟೆಗೆ ಸಂಬಂದಿಸಿದ ದೊಡ್ಡ ದೊಡ್ಡ ಗಾತ್ರದ ಕಲ್ಲು, ಮಣ್ಣನ್ನು ಖಾಸಗಿ ಜಮೀನಿಗೆ ಸಾಗಿಸಿರುವುದು ಪ್ರತ್ಯಕ್ಷವಾಗಿ ಕಾಣುತ್ತಿದ್ದೂ, ಸದರಿ ಕೋಟೆ ಗೋಡೆಯ ಕಲ್ಲುಗಳನ್ನುಅಕ್ರಮವಾಗಿ ಸಾಗಿಸಿರುವ ಜಯಂತಿ ಶ್ರೀನಾಥ್ ರವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿ ಸುವಂತೆ,ತಾಲ್ಲೂಕು ಆಡಳಿತಕ್ಕೆ ಅಗ್ರಹಿಸಿದ್ದಾರೆ.
ವಾಲ್ಮೀಕಿ ಜಾಗೃತಿ ವೇದಿಕೆ ಸ.ಕಾರ್ಯದರ್ಶಿ ಬೇಕರಿ ನಾಗರಾಜ್ ಮಾತನಾಡುತ್ತ ಸದರಿ ಕೋಟೆ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಇಲಾಖೆಗೆ ದೂರು ನೀಡಿದ ತಕ್ಷಣ ಕ್ರಮ ವಹಿಸಿದ್ದರೆ ಐತಿಹಾಸಿಕ ಕೋಟೆಯನ್ನು ಉಳಿಸಬಹುದಿತ್ತು, ಹಿಂದಿನ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯತನದಿಂದ ಇಂತಹ ಘಟನೆ ಸಂಭವಿಸಿದೆ. ಹಾಲಿ ಮುಖ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಹಾಗೂ ದಾಖಲಾತಿಗಳ ಪರಿಶೀಲನೆ ಮಾಡಲಾಗಿ ಮೇಲ್ನೋಟಕ್ಕೆ ಹಿಂದಿನ ಪುರಸಭೆ ಮುಖ್ಯಾಧಿಕಾರಿಗಳ ನಿರ್ಲಕ್ಷ ಎಂದು ಕಂಡು ಬಂದಿರುವ ಹಿನ್ನಲೆ ಮೇಲಾ ಧಿಕಾರಿಗಳಿಗೆ ವರದಿ ನೀಡಿ ಕಾನೂನು ಕ್ರಮ ವಹಿಸುವಂತೆ ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ವಾಣಿಜ್ಯ ಲಾರಿ ಚಾಲಕರ ಸಂಘದ ಅಧ್ಯಕ್ಷ ರಾಮಾಂಜಿ ನಾಯಕ, ರೈತ ಸಂಘದ ಕಾರ್ಯದರ್ಶಿ ರಾಮಾಂಜಿ ಸಹ ಹಾಜರಿದ್ದರು.
ವರದಿ. ಕೆ.ಮಾರುತಿ ಮುರಳಿ