ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು, ಹಗರಿಬೊಮ್ಮನಹಳ್ಳಿ ತಾಲೂಕು ಹಡಗಲಿ ತಾಲೂಕಿನ ವಿವಿದ ಗ್ರಾಮಗಳಲ್ಲಿನ ರಾಷ್ಟ್ರೀಯ ಉದ್ಯೋಗ ಖಾತ್ರಿ(ನರೇಗಾ)ಯೋಜನೆ ಕಾರ್ಮಿಕ ಮಹಿಳೆಯರು, ಗ್ರಾಕುಸ್ ಸಂಸ್ಥೆಯ ನಿರ್ದೇಶನದಂತೆ ಗ್ರಾಕೂಸ್ ಕಾರ್ಯಕರ್ತೆಯರ ನೇತೃತ್ವದಲ್ಲಿ ವಿಶಿಷ್ಠ ರೀತಿಯಲ್ಲಿ “ರಾಖಿ ಚಳುವಳಿ” ಮಾಡೋ ಮೂಲಕ, ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟಿದ್ದಾರೆ. ಈ ಮೂಲಕ ಅವರು ತಮ್ಮ ಅಹವಾಲುಗಳನ್ನು ಕೆಲ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಪ್ರಧಾನಿ ನಮೋರವರಲ್ಲಿ ಒತ್ತಾಯಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ನೂಲು ಹುಣ್ಣಿಮೆಯಂದು ಸಹೋದರಿಯರು ಸಹೋದರರಿಗೆ,ಸಹೋದರತ್ವದ ಸಂಕೇತವಾಗಿ ರಾಖಿ ಕಟ್ಟುವುದು ವಾಡಿಕೆಯಾಗಿದೆ. ಸಹೋದರಿಯು ಸಹೋದರನಿಗೆ ರಾಖಿ ಕಟ್ಟಿ ಶುಭ ಕೋರುತ್ತಾಳೆ,ತದನಂತರ ಅದಕ್ಕೆ ಪ್ರತಿಯಾಗಿ ಸಹೋದರನು ಸಹೋದರಿಗೆ ಪ್ರೀತಿ ಪೂರ್ವಕವಾಗಿ, ಏನಾದರೊಂದು ಉಡುಗೊರೆ ಕಾಣಿಕೆ ಕೊಡುವುದು ವಾಡಿಕೆಯಾಗಿದೆ. ಅದೇ ರೀತಿ ಹಗರಿಬೊಮ್ಮನಹಳ್ಳಿ ತಾಲೂಕಿನ ವಿವಿದ ಗ್ರಾಮಗಳ ಮಹಿಳಾ ಕಾರ್ಮಿಕರು, ನರೇಗಾ ಕಾರ್ಮಿಕರು ಗ್ರಾಕುಸ್ ಸಂಸ್ಥೆಯ ನೇತೃತ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟಿದ್ದಾರೆ, ಅಂತೆಯೇ ಪ್ರಧಾನಿಯವರಿಗೆ ಮನವಿ ಮಾ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದ್ದಾರೆ. ತಮ್ಮ ಪತ್ರದ ಮೂಲಕ ವರ್ಷದಲ್ಲಿ 200 ಮಾನವ ದಿನಗಳನ್ನು ನೀಡಬೇಕು, ಕೂಲಿಯನ್ನು ದಿನವೊಂದಕ್ಕೆ 600ರೂಗೆ ಹೆಚ್ಚಿಸಬೇಕು. ಸೇರಿದಂತೆ ಹಲವು ಅಹವಾಲುಗಳನ್ನು,ಈಡೇರಿಸುವಂತೆ ಕೋರಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವ ಮೂಲಕ, ಮೋದಿಯವರು ತಮಗೆ ಕೊಡುಗೆ ನೀಡಬೇಕೆಂದು ಮಹಿಳಾ ಕಾರ್ಮಿಕರು ಕೋರಿದ್ದಾರೆ. ಅಂದರೆ ಅವರು ಸ್ಥಳೀಯ ಸಹೋದರ ಸಮಾನರಾದ ವ್ಯಕ್ತಿಯೋರ್ವರಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಖವಾಡ ತೊಡಿಸಿ ಅಥವಾ ಅವರ ಮುಖವಿರುವ ಚಿತ್ರವಿರುವ ಪೇಪರನ್ನು, ವ್ಯಕ್ತಿಯೋರ್ವರ ಮುಖಕ್ಕೆ ತೊಡಿಸಿ ಅವರನ್ನೇ ಕಾರ್ಮಿಕ ಮಹಿಳೆಯರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಭಾವಿಸಿ, ಅವರಲ್ಲೇ ತಮ್ಮ ಸಹೋದರತ್ವ ಕಂಡುಕೊಂಡು. ಪ್ರೀತಿಯಿಂದ ವಾತ್ಸಲ್ಯದಿಂದ ಭ್ರಾತುತ್ವದಿಂದ ಸಂಪ್ರದಾಯದಂತೆ, ಕಾರ್ಮಿಕ ಮಹಿಳೆಯರೆಲ್ಲರೂ ತಲಾ ಒಂದು ರಾಖಿಯನ್ನು ಮೋದಿ ಪ್ರತಿ ಕೃತಿಯ ವ್ಯಕ್ತಿಯ ಕೈಗೆ ರಾಖಿ ಕಟ್ಟಿ ಶುಭ ಕೋರಿದ್ದಾರೆ.ಅವರ ಮುಂದೆ ತಮ್ಮ ಅಹವಾಲುಗಳನ್ನು ತೋಡಿಕೊಂಡಿದ್ದು ಸಂಕಷ್ಟಗಳನ್ನು ಅರುಹಿಕೊಂಡಿದ್ದಾರೆ, ಹಾಗೇಯೇ ಅವರ ಕೋರಿಕೆಗಳನ್ನು ಶೀಘ್ರವೇ ಈಡೇರಿಸುವ ಮೂಲಕ ತಮಗೆ ಕೊಡುಗೆಯನ್ನು ನೀಡಬೇಕೆಂದು ಕೋರಿದ್ದಾರೆ. ನಂತರ ಮಹಿಳಾ ಕಾರ್ಮಿಕರು ಮೋದಿ ಮುಖವಾಡದ ವ್ಯಕ್ತಿಗೆ ತಾವು ಕಟ್ಟಿದ್ದ ಎಲ್ಲಾ ರಾಖಿಗಳನ್ನು ಬಿಚ್ಚಿ, ಅವುಗಳನ್ನೆಲ್ಲಾ ಒಟ್ಟಾಗಿಸಿಕೊಂಡು ಸಿಹಿ ಖಾಧ್ಯ ಮತ್ತು ಅದರೊಟ್ಟಿಗೆ ತಮ್ಮ ಬೇಡಿಕೆಗಳಾದ ದಿನಗೂಲಿ 600ರೂ ಗೆ ಹೆಚ್ಚಿಸಬೇಕು ಹಾಗೂ 200 ಮಾನವ ದಿನಗಳನ್ನು ನೀಡಬೇಕು. ಸೇರಿದಂತೆ ಹಲವು ಬೇಡಿಕೆಗಳು ಮತ್ತು ಅಹವಾಲುಗಳನ್ನು ಪಟ್ಟಿ ಮಾಡಿ, ಅವೆಲ್ಲವುಗಳನ್ನು ಈಡೇರಿಸುವಂತೆ ಮನವಿ ಪತ್ರದಲ್ಲಿ ಬರೆದು. ರಾಖಿಗಳೊಂದಿಗೆ ಅವೆಲ್ಲವುಗಳನ್ನು ಅವರೆಲ್ಲರೂ ಒಟ್ಟಾಗಿ ಸಂಗ್ರಹಿಸಿಕೊಂಡು,ಅವರೇ ಖುದ್ದು ಅಂಚೆ ಕಚೇರಿಗೆ ತೆರಳಿ. ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ಕಚೇರಿ ವಿಳಾಸಕ್ಕೆ, ರಿಜಿಸ್ಟಾರ್ ಪೋಸ್ಟ್ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ವಿಜಯನಗರ ಜಿಲ್ಲೆಯ ಹೊಸಪೇಟೆ ಹಗರಬೊಮ್ಮನಹಳ್ಳಿ ತಾಲೂಕಿನ ಕೆಂಚಟನಹಳ್ಳಿ, ಮುತ್ಕೂರು, ಶಿವಾನಂದ ನಗರ, ಹಾಗೂ ಹಡಗಲಿ ತಾಲೂಕುಗಳ ವಿವಿದ ಗ್ರಾಮಗಳ. ನೂರಾರು ಮಹಿಳಾ ಕಾರ್ಮಿಕರು “ರಾಖಿ ಚಳುವಳಿ” ಯಲ್ಲಿ ಭಾಗಿಯಾಗಿದ್ದರು, ಗ್ರಾಕುಸ್ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.