ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಕೇರಾ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ತೋಟಗಾರಿಕೆ ಸಮಾಜಿಕ ಅರಣ್ಯ ಇಲಾಖೆ ಇವರ ಆಶ್ರಯದಲ್ಲಿ ಕೊಟಯ್ಯಕ್ಯಾಂಪ್ ಹಾಗೂ ಹೊಸಕೇರಾ ಗ್ರಾಮ ಪಂಚಾಯತಿ ಆವರಣದಲ್ಲಿ.”ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನವನ್ನು”ಸಸಿ ನಡೆಸುವ ಮುಖಾಂತರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಸುನಿತಾ,ಉಪಾಧ್ಯಕ್ಷರಾದ ಸುರೇಶ, ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್ ಇವರು ಸಸಿಯನ್ನು ನಡೆಸಿ ಉದ್ಘಾಟನೆ ಮಾಡಿ ಮಾತನಾಡಿದರು.ವಿಶ್ವ ಪರಿಸರ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಬುದ್ಧ ಜಯಂತಿ ಪಾರ್ಕ್‌ನಲ್ಲಿ ಅಶ್ವತ್ಥ ಸಸಿಯನ್ನು ನೆಡುವ ಮೂಲಕ ಏಕ್ಪೆಡ್ಮಾಂಕೆನಾಮ್ ತಾಯಿಯ ಹೆಸರಿನಲ್ಲಿ ಒಂದು ಗಿಡ) #Plant4Mother ಅಭಿಯಾನಕ್ಕೆ ಚಾಲನೆ ನೀಡಿದರು.
ಭೂಮಿ ತಾಯಿಯಿಂದ ಪ್ರಕೃತಿಯ ಪೋಷಣೆ ಮತ್ತು ನಮ್ಮ ತಾಯಂದಿರಿಂದ ಮಾನವ ಜೀವನದ ಪೋಷಣೆ ಸಮಾನಾಂತರವಾಗಿರುತ್ತದೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ತಮ್ಮ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಗಿಡ ನೆಡಲು ಪ್ರಪಂಚದಾದ್ಯಂತದ ಜನರಿಗೆ ಸಲಹೆ ನೀಡಿದರು. ಗಿಡ ಮತ್ತು ಭೂತಾಯಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡಿ ಎಂದು ಕೇಳಿಕೊಂಡರು, ದೇಶದಂತ ತಾಯಿ ಹೆಸರಲ್ಲಿ ಒಂದು ವೃಕ್ಷ ಅಭಿಯಾನವನ್ನು ಮಾಡಿ ಈ ಒಂದು ಕಾರ್ಯಕ್ರಮವನ್ನು ದೇಶ ಮತ್ತು ರಾಜ್ಯದ್ಯಂತ ಆಚರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿಯಾದ ವಿರುಪಾಕ್ಷಯ್ಯ ಸ್ವಾಮಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ವೆಂಕಟೇಶ್. ದೊಡ್ಡ ಬಸವ .ಮಾರುತಿ. ಲಕ್ಷ್ಮಣ. ಹನುಮಂತ. ಪುರುಷೋತ್ತಮ ಮಲ್ಲಿಕಾರ್ಜುನ .ರಾಮಣ್ಣ .ಮಾರಮ್ಮ. ರತ್ನಮ್ಮ .ಗ್ರಂಥಪಾಲಕರಾದ ಓಂಕಾರಪ್ಪ. ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮಂಜುನಾಥ ಹೊಸಕೇರಾ, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಗ್ರಾಮದ ಗುರಿ ಹಿರಿಯರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.