ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಮಲ್ಲಾಪೂರ ರಸ್ತೆಯ ಅಕ್ಕಪಕ್ಕದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ರಾಯಚೂರು, ಸಾಮಾಜಿಕ ಅರಣ್ಯ ವಿಭಾಗ ರಾಯಚೂರು,ತಾಲೂಕು ಪಂಚಾಯತ್ ಸಿಂಧನೂರು, ಸಾಮಾಜಿಕ ಅರಣ್ಯ ವಲಯ ಸಿಂಧನೂರು ಹಾಗೂ ವನಸಿರಿ ಫೌಂಡೇಶನ್ (ರಿ.)ರಾಯಚೂರು ಸಂಯುಕ್ತಾಶ್ರಯದಲ್ಲಿ ತಾಯಿ ಹೆಸರಲ್ಲಿ ಒಂದು ಗಿಡ ನೆಡಿ ಅಭಿಯಾನ ಕಾರ್ಯಕ್ರಮ ನೆರವೇರಿತು.
ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ತಾಯಿಯ ಅಭಿಯಾನ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ಪ್ರತಿಯೊಬ್ಬ ನಾಗರಿಕರು ತಮ್ಮ ತಾಯಿಯ ಹೆಸರಲ್ಲಿ ಒಂದು ಗಿಡ ನೆಟ್ಟು ಬೆಳಸುವಂತೆ ನಮ್ಮ ದೇಶದ ಪ್ರಧಾನ ಮಂತ್ರಿಗಳ ಘೋಷವಾಕ್ಯವಾಗಿದೆ ಅದನ್ನು ಎಲ್ಲರೂ ಪಾಲಿಸುವಂತಾಗಬೇಕು ಮತ್ತು ಇಂತಹ ಕಾರ್ಯಗಳನ್ನು ವನಸಿರಿ ಫೌಂಡೇಶನ್ ನಂತಹ ಸಂಘ ಸಂಸ್ಥೆಗಳು ಮುಂಚೂಣಿಯಲ್ಲಿ ನಿಂತು ಕಾರ್ಯಗತಗೊಳಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದರು.
ನಂತರ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಮಾತನಾಡಿ ದೇಶದ ಪ್ರಧಾನಮಂತ್ರಿಗಳು ಕೈಗೊಂಡ ತಾಯಿಗಾಗಿ ಒಂದು ಗಿಡ ನೆಡುವ ಅಭಿಯಾನ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬರೂ ಇಂತಹ ಕಾರ್ಯಗಳಲ್ಲಿ ಭಾಗವಹಿಸಬೇಕು ಮತ್ತು ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಲ್ಲಿ ಒಂದೊಂದು ಗಿಡನೆಟ್ಟು ಪಾಲನೆ ಪೋಷಣೆ ಮಾಡಬೇಕು ಇದರ ಮೂಲಕ ತಾಯಿಯ ಋಣ ತೀರಿಸಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ,ಸಮಾಜಿಕ ಅರಣ್ಯ ಅಧಿಕಾರಿ ಕೆ, ವಿ ರುದ್ರಮುನಿ,ಪರಿಸರ ಪ್ರೇಮಿ ರಾಜ್ಯ ಪ್ರಶಸ್ತಿ ಪುರಸ್ಕತರು ಅಮರೇಗೌಡ ಮಲ್ಲಾಪುರ, ದೇವರಗುಡಿ ಗ್ರಾಮ ಪಂಚಾಯತಿ ಅಧಿಕಾರಿ ಸಿದ್ದಪ್ಪ.ಡಾ.ಬಸವರಾಜ,ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ತಾಲೂಕು ಪಂಚಾಯತಿ ಅಧಿಕಾರಿಗಳೂ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,ವನಸಿರಿ ಫೌಂಡೇಶನ್ ಅಧ್ಯಕ್ಷರು ಸದಸ್ಯರು,ದೇವರಗುಡಿ ಹಾಗೂ ಮಲ್ಲಾಪೂರ ಗ್ರಾಮದ ಹಿರಿಯರು ಯುವಕರು ಭಾಗವಹಿಸಿದ್ದರು.