ಭದ್ರಾವತಿ: ಕೊಲ್ಕತ್ತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಡಾ.ಮೋಮಿತಾ ಮೇಲೆ ನಡೆದ ಲೈಂಗಿಕ ಅತ್ಯಾಚಾರದ ವಿರುದ್ಧ ಭದ್ರಾವತಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಗಾಂಧಿ ಪ್ರತಿಮೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಖಂಡನೀಯ. ಜೀವ ರಕ್ಷಿಸುವ ವೈದ್ಯರ ಮೇಲಿನ ಕೃತ್ಯ ಅಮಾನವೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರು, ಅನೇಕ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಇಚ್ಛೆಯಿಂದ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಡಾ. ವರ್ಷ, ಡಾ. ನಿತೀಶ್ ಕುಮಾರ್ ಕೆ. ಹಿರಿಯ ಪತ್ರಕರ್ತ ಕಣ್ಣಪ್ಪ, ಶಿವಕುಮಾರ್(ಬಂಕ್ ಕುಮಾರ್), ಸುಂದರ್ ಬಾಬು, ಚಂದ್ರಶೇಖರ್, ನಿತ್ಯಾನಂದ, ಸುರೇಶ್, ಕೃಷ್ಣಣ್ಣ, ಚಂದ್ರಣ್ಣ, ರಾಧಾಕೃಷ್ಣ, ವಡಿವೇಲು, ದೇವರಾಜ್ ಹೋರಾಟದಲ್ಲಿ ಭಾಗವಹಿಸಿದ್ದರು. ಈ ಹೋರಾಟದ ನಾಯಕತ್ವವನ್ನು ಜಯಕುಮಾರ್, ವಿಜಯ್, ಶ್ರೀನಿವಾಸ್, ಶರವಣ, ಪಳನಿ, ಕಾರ್ತಿಕ್, ಕೇಶವ, ಮದನ್, ರಾಮು, ಸತೀಶ್ ಕುಮಾರ್ ಎಸ್, ರಾಜೇಂದ್ರ, ಅರುಣ, ತಿರು, ಪವನ, ಶರತ್, ಸಚಿನ್, ಸಂದೀಪ್ ಸೇರಿದಂತೆ ಅನೇಕ ಹಿರಿಯರು ಮತ್ತು ಯುವಕರು ಭಾಗವಹಿಸಿದ್ದರು.
ವರದಿ: ಕೆ ಆರ್ ಶಂಕರ್ ಭದ್ರಾವತಿ