ಫೋಟೊಗೆ ಮಾತ್ರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಮಾಡುತ್ತಿದ್ದಾರೆ:ಗ್ರಾಮಸ್ಥರ ಆರೋಪ
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗೇನಹಳ್ಳಿ ತಾಂಡಾ ಮತ್ತು ಶ್ರೀರಂಗಪುರ ತಾಂಡದ ಗ್ರಾಮಸ್ಥರು ಮದುವೆ ಮನೆಯಲ್ಲಿ ಊಟ ಸೇವಿಸಿ ಕಳೆದ 5 ದಿನಗಳಿಂದ 40ಕ್ಕೂ ಹೆಚ್ಚು ಗ್ರಾಮಸ್ಥರು ವಾಂತಿ ಬೇದಿಯಿಂದ ಬಳಲಿ ತಾಲ್ಲೂಕಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು. ಮತ್ತು ವಾಂತಿ ಬೇದಿಯಿಂದ ಬಳಲಿ ಪಾವಗಡಕ್ಕೆ ಬಂದು ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆಂದು ತುಮಕೂರು ಜಿಲ್ಲಾ ಆಸ್ಪತ್ರೆ ಹೋಗಿ ಚಿಕಿತ್ಸೆ ಫಲಿಸದೆ ರಾಮೀ ಬಾಯಿ (70) ಮೃತಪಟ್ಟಿರುತ್ತಾರೆ.ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿರುವ ಕಾರಣ ನಾಗೇನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಗ ಆರೋಗ್ಯ ಕೇಂದ್ರವನ್ನು ತೆರೆದು ಚಿಕಿತ್ಸೆ ನೀಡಲಾಗಿದೆ.
ಶ್ರೀರಂಗಪುರ ತಾಂಡದಲ್ಲಿ ಮಂಗಳವಾರ ಸಂಜೆ ಹೊಸದಾಗಿ ಲಕ್ಷ್ಮೀದೇವಿ ಎನ್ನುವವರು ವಾಂತಿ ಬೇದಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದಾರೆ ಹೆಚ್ಚಿನ ಚಿಕಿತ್ಸೆಗೆಂದು ತುಮಕುರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಇಂದು ಮದುವೆಗೆಂದು ಬಂದಿದ್ದ ಸಂಬಂಧಿ ಕೆ.ಸೇವಾಲಾಲ್ ಪುರ ಗ್ರಾಮದ ಮೂವರಿಗೆ ಸಹ ವಾಂತಿ ಬೇದಿಯಿಂದ ಬಳುತಿದ್ದಾರೆ. ಈ ಘಟನೆಗಳು ಕಳೆದ ಒಂದು ವಾರದಿಂದ ದಿನೇ ದಿನೇ ಹೆಚ್ಚಾಗಿ ಕಂಡುಬರುತ್ತಿದೆ. ಕಾರಣ ಏನು ಎಂಬುದು ತಿಳಿಯದೇ ಜನ ಭಯ ಭೀತಿಯಲ್ಲಿದ್ದಾರೆ.
ಆದರೆ ನಾಗೇನಹಳ್ಳಿ ಒಂದು ಗ್ರಾಮದಲ್ಲಿ ಮಾತ್ರ ಆರೋಗ್ಯ ಕೇಂದ್ರ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಶ್ರೀರಂಗಪುರ ತಾಂಡದಲ್ಲಿಯೂ ಸಹ ಅಧಿಕಾರಿಗಳು 5 ಜನರಿಗೆ ವಾಂತಿ ಬೇದಿಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಶ್ರೀರಂಗಪುರ ತಾಂಡದಲ್ಲಿ 15 ಕ್ಕೂ ಹೆಚ್ಚಿನ ಜನರಿಗೆ ವಾಂತಿ ಬೇದಿಯಿಂದ ಇಂದಿಗೂ ಸಹ ಚಿಕಿತ್ಸೆಗೆಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಗ್ರಾಮಕ್ಕೆ ಅಧಿಕಾರಿಗಳು ಭೇಟಿ ಮಾಡಿಲ್ಲಾ, ಗ್ರಾ.ಪಂ ಮಟ್ಟದ ಅಧಿಕಾರಿಗಳು ಬಂದು ಫೋಟೊ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಪರಿಸ್ಥಿತಿಯನ್ನು ಕೇಳುವವರಿಲ್ಲ ವೆಂದು ಶ್ರೀರಂಪುರ ತಾಂಡದ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರು ಮಾತನಾಡಿ ನಾವು ದಿನ ಕೂಲಿ ಮಾಡಿ ಜೀವನ ಸಾಗಿಸುವವರು ನಮಗೆ ಹಿಂದೆ ಮುಂದೆ ಯಾರಿಲ್ಲಾ, ಉಶಾರಿಲ್ಲವೆಂದರೂ ಸಹ ನಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೂಲಿ ಕೆಸಲಕ್ಕೆ ಹೋಗುತ್ತಿದ್ದೇವೆ. ಕಾರಣ ಖಾಸಗಿ ಆಸ್ಪತ್ರೆ ಹೋಗಬೇಕಾದರೆ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೂಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಮಕ್ಕಳಿಗೆ ಹಾಗೆಯೇ ವಾಂತಿ ಬೇದಿ ಸುಸ್ತು ಆದರೆ ಮತ್ತೆ ರಾತ್ರಿ ಎನ್ನದೆ ಯಾರದೊ ಕೈ ಕಾಲು ಹಿಡಿದು ದ್ವಿಚಕ್ರ ವಾಹನಗಳಲ್ಲಿ ಹೋಗಿ ಚಿಕಿತ್ಸೆ ಪಡೆದು ಮನೆಗೆ ಬರುವಂತಾಗಿದೆ. ರಾತ್ರಿ ಸಮಯದಲ್ಲಿ ಆಸ್ಪತ್ರೆಯಿಂದ ಬರಬೇಕಾದರೆ ಕರಡಿ, ಕಾಡು ಹಂದಿ ದಾಳಿ ನಡೆಸುವ ಪ್ರಾಣ ಭಯದಿಂದ ಓಡಾಡುತ್ತಿದ್ದೇವೆ. ಅಧಿಕಾರಿಗಳು ಗಮನ ಹರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ವರದಿ. ಕೆ.ಮಾರುತಿ ಮುರಳಿ