ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಗೂರು ಸೊಣ್ಣೇನಹಳ್ಳಿಯ ಗೋಲ್ಡನ್ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗೋಲ್ಡನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಸಂಸ್ಥಾಪಕ ಅಧ್ಯಕ್ಷರಾದ ಇಕ್ಬಲ್ ಸಾಬ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿಯ ಜೊತೆ ಜೊತೆಗೆ ಭವಿಷ್ಯದ ಸಾಧನೆಯ ಗುರಿಯ ಕಡೆ ಹೆಚ್ಚು ಆಸಕ್ತಿ ತೋರುವ ಮೂಲಕ ಉತ್ತಮ ಹೆಜ್ಜೆ ಹಾಕಿದಾಗ, ನಿಮ್ಮ ಮುಂದಿನ ಗುರಿ ತಲುಪಲು ಸಾಧ್ಯ. ಪದವಿ ಪೂರ್ಣ ಮಾಡಿರುವ ನಿಮಗೆ ಈಗ ಜವಾಬ್ದಾರಿ ಬಂದಿದೆ. ನಿಮ್ಮಲ್ಲಿ ತಾಳ್ಮೆ, ಸಹನೆ, ಶಿಸ್ತು, ಸಹಕಾರ, ಸಮಾಜ ಸೇವೆಯ ಅಂಶಗಳನ್ನು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಸಾಗುವ ಮೂಲಕ ಪೋಷಕರಿಗೆ, ಗುರುಗಳಿಗೆ ಉತ್ತಮ ಹೆಸರು ತನ್ನಿ, ಎಲ್ಲಾರಿಗೂ ಶುಭವಾಗಲಿ ಎಂದರು.
ಇನ್ಸ್ಟಿಟ್ಯೂಟ್ ನ ಸಿ.ಇ.ಓ ಸಿರಾಜ್ ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಪ್ರಗತಿಗೆ ಬಹುಮುಖ್ಯವಾದ ಅಸ್ತ್ರ. ನೀವು ಶಿಸ್ತಿನ ಮೂಲಕ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಿ ನೀವು ದೊಡ್ಡ ಸಾಧಕರಾಗುವಲ್ಲಿ ಯಾವುದೇ ಅನುಮಾನವಿಲ್ಲ. ಪದವಿ ಪೂರ್ಣ ಮಾಡುವ ಮೂಲಕ ನೀವು ಇಂದು ಪ್ರಬುದ್ದ ಹಂತಕ್ಕೆ ಬಂದಿದ್ದೀರಾ. ನೀವು ಮುಂದೆ ದೊಡ್ಡ ದೊಡ್ಡ ಅಧಿಕಾರಿಗಳಾಗಿ, ಸಮಾಜದ ಉತ್ತಮರಾಗಿ ಹೊರಹೊಮ್ಮುವ ಮೂಲಕ ಎಲ್ಲಾರಿಗೂ ಮಾದರಿಯಾಗಬೇಕು. ವಿಶ್ವದ ಮಹಾನ್ ಸಾಧಕರ ಆದರ್ಶ ಪಾಲನೆ ಮಾಡುವ ಮೂಲಕ ಬೌದ್ಧಿಕ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಸೈಯದ್ ಶಾಕೀರ್ ರವರು ಮಾತನಾಡಿ, ಮೂರು ವರ್ಷಗಳ ಕಾಲ ಬಹಳಷ್ಟು ಪ್ರೀತಿ, ಸಹಕಾರದ ಮೂಲಕ ಶೈಕ್ಷಣಿಕ ವಿದ್ಯಾಭ್ಯಾಸದ ಪ್ರಮುಖ ಹಂತ ಪದವಿ ಪೂರೈಕೆ ಮಾಡಿರುವುದು ಬಹಳ ಸಂತಸ. ಈ ಹಂತದಲ್ಲಿ ನಿಮಗೆ ಆಲೋಚಿಸುವ ಶಕ್ತಿ ಇದೆ. ನಿಮ್ಮ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸ ಏನಾಗೀರಬೇಕು ಎಂಬುದನ್ನು ಉಪನ್ಯಾಸಕರ, ಪೋಷಕರ ಜೊತೆಗೆ ಚರ್ಚಿಸಿ ನಿರ್ಣಯ ಕೈಗೊಂಡು ಉತ್ತಮ ಸಾಧಕರಾಗಿ
ಎಂದರು.
ಕಾರ್ಯಕ್ರಮದಲ್ಲಿ ಬಿ.ಕಾಂ ಹಾಗೂ ಬಿ.ಸಿ.ಎ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನೆನಪಿನ ಕಾಣಿಕೆ, ಪದವಿ ಪ್ರಶಸ್ತಿ ಪತ್ರದ ಮೂಲಕ ಪದವಿ ಪುರಸ್ಕಾರ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗೋಲ್ಡನ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಹುಸ್ನ ಮೆಡಂ, ಮುಖ್ಯೋಪಾಧ್ಯಾಯರಾದ ಲಕ್ಷ್ಮಮ್ಮ, ಹಜರಾತ್ ಉಪನ್ಯಾಸಕರಾದ ಜಯಲಕ್ಷ್ಮೀ, ಸಲಾಹುದ್ದೀನ್, ಅಲ್ಲಬಕಾಶ್, ಹುಸೇನ್, ರೇಷ್ಮಾ, ಶಾಜೀಯಾ, ದಿವ್ಯ, ಪ್ರಮೀಳಾ, ವೆಂಕಟೇಶ್, ನವೀನ್, ನಾಗರಾಜ್ ಹಾಗೂ ಗೋಲ್ಡನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಹಸೀನಾ, ಉಜರಾ, ಆಯೇಷಾ, ಮಹಮ್ಮದ ಷರೀಫ್, ದೈಹಿಕ ಶಿಕ್ಷಕರಾದ ಪದ್ಮಾವತಿ ಸೇರಿದಂತೆ ಮತ್ತಿತರರು ಹಾಜರಿದ್ದರು.
