ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ಹಳ್ಳಿಗಳಿಗೆ ಹೋಗುವಂಥಹ ವಿದ್ಯಾರ್ಥಿಗಳು ಬಸ್ ಗಾಗಿ ಪರದಾಡುತ್ತಿರುವುದು ಸಾಮಾನ್ಯವಾದ ಸಂಗತಿಯಾಗಿದ್ದು ಉಚಿತ ಯೋಜನೆಯ ಎಫೆಕ್ಟ್ ನಿಂದ ವಯಸ್ಸಾದ ವೃದ್ದರು ಸಹಿತ ಪರದಾಡಂತಾಗಿದೆ ಅಲ್ಲದೆ ಬೇರೆ ಬೇರೆ ಹಳ್ಳಿಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ ನಲ್ಲಿ ಕುಳಿತುಕೊಳ್ಳಲು ಶೀಟು ಸಿಗದೆ ನಿಂತುಕೊಂಡೆ ಸರಕಾರಕ್ಕೆ ಇಡಿ ಶಾಪ ಹಾಕುತ್ತಿದದ್ದು ಕಂಡು ಬಂತು! ಇನ್ನು ಮುಂದಾದರು ತಾಲೂಕ ಕೆ ಎಸ್ ಆರ್ ಟಿ ಸಿ ಕಾರ್ಯನಿರ್ವಾಹಕ ಮುಖ್ಯ ಅಧಿಕಾರಿಗಳು ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಅದೇ ರೀತಿಯಾಗಿ ತಾಲೂಕಿನ ಶಾಸಕರಾದ ಡಾ. ಅಜಯ್ ಸಿಂಗ್ ಅವರು ಜೇವರ್ಗಿ ತಾಲೂಕಿನ ಪ್ರತಿ ಹಳ್ಳಿಗಳಿಗೆ ಹೆಚ್ಚುವರಿ ಬಸುಗಳನ್ನು ಬಿಡುಗಡೆ ಮಾಡಬೇಕೆಂದು ಗ್ರಾಮೀಣ ಭಾಗದ ಹಿತ ಚಿಂತಕರಾದ ಮೈಬೂಬ್ ಪಟೇಲ್ ನಡುವಿನಮನಿ ಗೌಡ್ರು ಬಿಳವಾರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
