ಪಾವಗಡ :ವಿದ್ಯಾರ್ಥಿಗಳ ಪರಿಶ್ರಮದಲ್ಲಿ ಪೋಷಕರ ಮತ್ತು ಗುರುವಿನ ಪ್ರೋತ್ಸಾಹ ಮತ್ತು ಪ್ರೇರಣೆ ಇರುತ್ತದೆ ಎಂದು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾದೇಶ್ ವಿ. ತಿಳಿಸಿದರು.
ವಿದ್ಯಾರ್ಥಿಗಳ ಜೀವನ ರೂಪಿಸುವುದರಲ್ಲಿ ಗುರುವಿನ ಪಾತ್ರ ಅಪಾರ ಅಂತಹ ಗುರುವಿಗೆ ಗೌರವ ಕೊಡುವುದು ನಮ್ಮ ಕರ್ತವ್ಯವೆಂದರು.
ವಿದ್ಯ ಮತ್ತು ಸಾಧನೆ ಸಾಧಕನ ಸ್ವತ್ತಾಗಿದ್ದು,
ಅದನ್ನು ಯಾರೂ ಸಹ ಕದಿಯಲು ಸಾಧ್ಯವಿಲ್ಲ ಎಂದರು.ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋಗಲು ಬಹಳಷ್ಟು ಪ್ರೊತ್ಸಾಹ ಪ್ರೇರಣೆ, ಉತ್ತೇಜನ ಅತಿ ಮುಖ್ಯ ಎಂದರು.
ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಆ ಭಗವಂತ ಆರೋಗ್ಯ ಐಶ್ವರ ಕೊಡಲಿ ಇನ್ನು ಜೀವನದಲ್ಲಿ ಹೆಚ್ಚಿನ ಸಾದನೆ ಮಾಡಿ ದೇಶಕ್ಕೆ ಮಾದರಿಯಾಗಿ, ದೇಶದ ಕಿರ್ತಿ ಹಾರಿಸಲಿ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ಮಾತನಾಡಿ,ಮಕ್ಕಳಿಗೆ ಚಿಕ್ಕಂದಿನಿಂದಲೇ ವಿದ್ಯೆ ಜೊತೆಗೆ ಜೀವನದ ಕಷ್ಟವನ್ನು ಕಲಿಸಬೇಕಿದೆ.
ಬರಗಾಲದ ನಾಡಿನಲ್ಲಿ ಬಂಗಾರದ ಮಳೆ ಎಂಬತೆ ತಾಲ್ಲೂಕಿನ ಯುವ ಪ್ರತಿಭೆ ಕ್ರೀಡೆಯಲ್ಲಿ ಮತ್ತು ಶಿಕ್ಷಣದಲ್ಲಿ ಪದಕಗಳನ್ನು ಕಳಿಸಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಕೆಲಸವನ್ನು ಮಾಡಿದ ಸಂಘಕ್ಕೆ ಅಭಿನಂದನೆ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ವಿವಿಧ ವಿಷಯಗಳಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ ಆರ್ ಸಿ ವೆಂಕಟೇಶಪ್ಪ, ಈ ಸಿ ಓ ವೇಣುಗೋಪಾಲ ರೆಡ್ಡಿ, ಎಡಿಎಂ ಶಂಕರಪ್ಪ, ಶಿಕ್ಷಕರಾದ ಮಾರುತೇಶ್, ಯತಿ ಕುಮಾರ್, ಕಲಾ ಸಂಘದ ಪದಾಧಿಕಾರಿಗಳಾದ, ಕಾರ ನಾಗಪ್ಪ, ಈರಣ್ಣ, ಆರ್ ಸಿ ರಾಮಚಂದ್ರಪ್ಪ, ಗಣೇಶ್ ನಾಯಕ್, ಬೊಮ್ಮಣ್ಣ ಪಾತಣ್ಣ ಗೋವಿಂದಪ್ಪ ಸತ್ಯ ನಾರಾಯಣ ದೊಡ್ಡಯ್ಯ ಅಶೋಕ್ ಕುಮಾರ್ ನೀಲ ನಾಗರಾಜು ಹನುಮಂತರಾಯಪ್ಪ
ಟಿ ಹೆಚ್ ಹನುಮಂತ ರಾಯಪ್ಪ ಪೋಷಕರು ವಿದ್ಯಾರ್ಥಿಗಳು ಮತ್ತು ಅನೇಕ ಶಿಕ್ಷಕರು ಹಾಜರಿದ್ದರು.
ವರದಿ.ಕೆ.ಮಾರುತಿ ಮುರಳಿ