ಬೆಂಗಳೂರು ಸಮೀಪ ಎರಡು ಸಾವಿರ ಎಕ್ರೆಯಲ್ಲಿ KHIR city ದೊಡ್ಡಬಳ್ಳಾಪುರ ಮತ್ತು ದಾಬಸ್ ಪೇಟೆಯ ಸಮೀಪದಲ್ಲಿ ಸ್ಥಾಪಿಸುತ್ತಿರುವ ಈ ಒಂದು ಕಾಮಗಾರಿಯನ್ನು ನಮ್ಮ ಕೊಪ್ಪಳಕ್ಕೆ ಅವಕಾಶ ಮಾಡಿಕೊಟ್ಟರೆ ಇಲ್ಲಿಯ ಯುವ ಸಬಲೀಕರಣಕ್ಕೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಒಂದಿಷ್ಟು ಸಹಾಯವಾಗುತ್ತದೆ ಹಾಗಾಗಿ ಈ ಮೂಲಕ ಜಿಲ್ಲಾ ಅಧಿಕಾರಿಗಳಿಗೆ ಮತ್ತು ಜಿಲ್ಲಾ ದಂಡಾಧಿಕಾರಿಗಳಿಗೆ ಅವರಿಗೆ ಮನವಿ ಮಾಡಲಾಯಿತು. ಈ ಒಂದು ಸಂದರ್ಭದಲ್ಲಿ ಕೊಪ್ಪಳದ ಹಿರಿಯ ಸಾಹಿತಿಗಳು ಹೋರಾಟಗಾರರು ಅಲ್ಲಮಪ್ರಭು ಬೆಟ್ಟದೂರು, ದ್ರಾವಿಡ ಕನ್ನಡಿಗರು ಚಳುವಳಿಯ ಯಮನೂರಪ್ಪ ಹಳ್ಳೇರ, ಲೋಹಿತ್ ಕಮ್ಮಾರ, ಶಿವರಾಜ್ ನಾಯಕ್, ಸಂಜೀವ ಇಂಗಳದಾಳ, ಎ.ಎಸ್ ಗಫರ್ ಇನ್ನಿತರ ಯುವಕರು ಸೇರಿದ್ದರು.
