ಹಾವೇರಿ:ದಿನಾಂಕ 23/08/2024 ರಂದು ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆ ಶಿಕ್ಷಣ ಫೌಂಡೇಶನ್ ಡೆಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಅರಿವು ಕೇಂದ್ರಗಳಲ್ಲಿ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಅಂಗವಾಗಿ ಹಾವೇರಿ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಹಂತದ ಸ್ಟೀರಿಂಗ್ ಕಮಿಟಿ ಸಭೆ ಹಾಗೂ ಡಿವೈಸ್ ವಿತರಣಾ ಕಾರ್ಯಕ್ರಮ ಜರುಗಿತು.
ಸಭೆಯಲ್ಲಿ ಚರ್ಚಿಸಿದ ವಿಷಯಗಳು:
1.ಜಿಲ್ಲೆಯಲ್ಲಿ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಅನುಷ್ಠಾನ.
2.ಸದಸ್ಯತ್ವ ನೊಂದಣಿ ಶಿಕ್ಷಣ ಪಿಡಿಯಾ ಬಳಕೆ.
3.MY GP app ಬಳಕೆ ಮಾಡುವುದು.
4.ಸಂಜೀವಿನಿ ಸಂಘದ ಸದಸ್ಯರಿಗೆ ಡಿಜಿಟಲ್ ಕೌಶಲ್ಯ ತರಬೇತಿ ಆಯೋಜನೆ ಮಾಡುವ ಕುರಿತು.
5.ಜಿಲ್ಲೆಯ ಎಲ್ಲ ಗ್ರಂಥಾಲಯಗಳಿಗೆ ಇಂಟರ್ನೆಟ್ ಹಾಗೂ ಕರೆಂಟ್ ವ್ಯವಸ್ಥೆ ಕಲ್ಪಿಸುವುದು.
6.ಗ್ರಂಥಾಲಯ ಹಾಗೂ ಕಾಲೇಜ್ ಮಟ್ಟದಲ್ಲಿ AI ತರಬೇತಿಗಳನ್ನು ಆಯೋಜನೆ ಮಾಡುವುದು.
ಸಭೆಯಲ್ಲಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯನ್ನು AGM ಶಂಭುಲಿಂಗ ನಡುವಿನಮನಿ ಸರ್ ಹೇಳಿದರು. ಕಾರ್ಯಕ್ರಮದ ಪ್ರಗತಿಯನ್ನು ಯಲ್ಲಪ್ಪ ಸಾಳುಂಕೆ ಪ್ರಸ್ತುತಪಡಿಸಿದರು. AI ಕಾರ್ಯಕ್ರಮದ ಕುರಿತು ಗುರುಪಾದಪ್ಪ ಶಿರಬಡಗಿ ಮಾಹಿತಿಯನ್ನು ಹಂಚಿಕೊಂಡರು.ನಾರಾಯಣ ಕಿರ್ಲೋಸ್ಕರ್ (KMSPP) ಸಭೆಯಲ್ಲಿ ಹಾಜರಿದ್ದು ಚಂದ್ರು H M ಸಭೆಯ ನಿರೂಪಣೆಯನ್ನು ಮಾಡಿ ಸ್ವಾಗತಿಸಿದರು.
ಈ ಸಭೆಯಲ್ಲಿ CEO ಸರ್ DS ಸರ್ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು 8 ತಾಲೂಕಿನ AD, PDO,92 ಗ್ರಂಥಾಲಯದ ಮೇಲ್ವಿಚಾರಕರು ಹಾಜರಿದ್ದರು.