ಮೈಸೂರು:ಶ್ರೀ ರಾಮ ಸೇನೆ ಸಂಸ್ಥಾಪಕರಾದ ಶ್ರೀ ಪ್ರಮೋದ್ ಮುತಾಲಿಕ್ ರವರು ಇಂದು ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಸಾಹಿತಿಗಳು ಮತ್ತು ಕನ್ನಡ ಚಳುವಳಿಗಾರರಾದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದಿವಂಗತ ನ. ನಾಗಲಿಂಗ ಸ್ವಾಮಿ ರವರ ಮನೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನ.ನಾಗಲಿಂಗ ಸ್ವಾಮಿ ರವರ ಪುತ್ರ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತು ಕುಟುಂಬ ವರ್ಗದವರು ಪ್ರಮೋದ್ ಮುತಾಲಿಕ್ ರವರಿಗೆ ಗೌರವಿಸಿ ಸನ್ಮಾನಿಸಿದರು.
