ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಕುಮಾರಸ್ವಾಮಿ ಬಡಾವಣೆಯ ಚಾರ್ವಿಕ.S
ಕೃಷ್ಣನಷ್ಟು ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸಿ ಜೀವಿಸಿದವರು ಮತ್ತೊಬ್ಬರಿಲ್ಲ; ಅದು ನಿಸರ್ಗದ, ಎಂದರೆ ಹೊರಗಿನ ಪ್ರಕೃತಿಯಾಗಿರಬಹುದು; ಅಂತರಂಗದ, ಎಂದರೆ ಮನುಷ್ಯನ ಒಳಗಿನ ಪ್ರಕೃತಿಯಾಗಿರಬಹುದು-ಈ ಎರಡನ್ನೂ ಅವನಷ್ಟು ಚೆನ್ನಾಗಿ ಬಲ್ಲವರು ಇನ್ನೊಬ್ಬರಿಲ್ಲ ಕೃಷ್ಣನನ್ನು ನಮ್ಮ ಪರಂಪರೆ ‘ಪೂರ್ಣಾವತಾರಿ’ ಎಂದು ಎತ್ತಿಹಿಡಿದಿದೆ. ಇದಕ್ಕೆ ಕಾರಣವೇ ಅವನು ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡವನು, ಪ್ರಕೃತಿಯ ಎಲ್ಲಾ ಆಯಾಮಗಳಿಗೂ ಸ್ಪಂದಿಸಿದವನು ಎಂದು. ಅವನು ಕಾಳಿಂಗನನ್ನು ನಿಗ್ರಹಿಸಿದ್ದು, ಗಿರಿಯನ್ನು ಎತ್ತಿಹಿಡಿದದ್ದು –ಇವೆಲ್ಲವೂ ಪ್ರಕೃತಿಯನ್ನು ಕಾಪಾಡುವುದಕ್ಕಾಗಿಯೇ ಅಲ್ಲವೆ? ಹೀಗೆಯೇ ಅವನು ಗೆಳೆಯ, ಸಹೋದರ, ಮಗು, ಗುರು, ರಾಜ, ಸಾರಥಿ, ಪ್ರಿಯಕರ, ಸಂಗಾತಿ, ಯೋಧ, ರಾಜಕಾರಣಿ ಹೀಗೆ ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾದದ್ದು ಕೂಡಾ ಸೃಷ್ಟಿಯಲ್ಲಿ ಪ್ರಕಟವಾಗಿರುವ ಬೇರೆ ಬೇರೆ ಪ್ರಕೃತಿಗಳ ಎಂದರೆ ಸ್ವಭಾವಗಳ ಉದ್ಧಾರಕ್ಕಾಗಿಯೇ ಅಲ್ಲವೆ?
ವರದಿ. ಕೆ.ಮಾರುತಿ ಮುರಳಿ