ನವೆಂಬರ್ ತಿಂಗಳಲ್ಲಿ ನಡೆಯುವ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಅಂಗವಾಗಿ
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಪ್ರತಿ ತಾಲೂಕಿನಲ್ಲಿ ಸರ್ಕಾರಿ ಅಥವಾ ಖಾಸಗಿ ಶಾಲಾ ಶಿಕ್ಷಣದಲ್ಲಿ ಹಲವು ಸವಾಲುಗಳ ನಡುವೆಯೂ ನಾವಿನ್ಯ ಶೈಕ್ಷಣಿಕ ಯೋಜನೆ, ನಾವಿನ್ಯ ಕಲಿಕೆಯನ್ನು, ಮಕ್ಕಳಲ್ಲಿ ಸೃಜನಶೀಲತೆ ಮತ್ತು ಸಾಹಿತ್ಯ ಅಭಿರುಚಿಯನ್ನು ಪ್ರೋತ್ಸಾಹಿಸುತ್ತಿರುವ ಒಬ್ಬ ಶಿಕ್ಷಕರನ್ನು ಹಾಗೂ ಒಂದು ಶಾಲೆಯನ್ನು ಗುರುತಿಸಿ ಗೌರವಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಶಾಲೆಗಳ ಸಾಧನೆಗೆ ಹೆಚ್ಚಿನ ಆದ್ಯತೆ ಇರುತ್ತದೆ. ಪರಿಷತ್ತಿನ ಸಮಿತಿಯ ತೀರ್ಮಾನ ಅಂತಿಮವಾಗಿರುತ್ತದೆ.
ಅರ್ಹರನ್ನು ಗುರುತಿಸಿ ಸಂಬಂಧಿಸಿದ ದಾಖಲೆಗಳೊಂದಿಗೆ ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಹಾಗೂ ಭಾವ ಚಿತ್ರದೊಂದಿಗೆ ಪಿಡಿಎಫ್ ರೂಪದಲ್ಲಿ ನಮ್ಮ ಇಮೇಲ್ ಗೆ ಕಳುಹಿಸಲು ಕೋರಲಾಗಿದೆ. ಅರ್ಹರನ್ನು ಯಾರು ಬೇಕಾದರೂ ನಾಮ ನಿರ್ದೇಶನ ಮಾಡಬಹುದು. ಅಥವಾ ಸ್ವತಃ ಅಭ್ಯರ್ಥಿಯೇ ತಮ್ಮ ದಾಖಲೆಗಳನ್ನು ಸಲ್ಲಿಸಬಹುದು.
ಕೊನೆಯ ದಿನಾಂಕ- 05. ಅಕ್ಟೋಬರ್.2024.
ನಮ್ಮ ಇಮೇಲ್
makkalamandara@gmail.com.
ಮಾಹಿತಿಗೆ ಸಂಪರ್ಕಿಸಿ.
9980952630., ಶ್ರೀ ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ನಿರ್ದೇಶಕರು.
ಮಕ್ಕಳ ಸಾಹಿತ್ಯ ಪರಿಷತ್ತು.
ಸಂಪಾದಕರು. ಮಕ್ಕಳ ಮಂದಾರ ಪತ್ರಿಕೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಶಿವಮೊಗ್ಗ ಸಮಿತಿಯಲ್ಲಿ,
ಕುಮುದಾ ಸುಶೀಲಪ್ಪ
ಡಾ. ಶಿವಪ್ರಸಾದ್ ಕೊಡಕ್ಕಲ್,
ರತ್ನಾಕರ ಕೆಸಿನಮನೆ.
ಡಾ. ಉಮೇಶ್ ಭದ್ರಾಪುರ್,
ಸತೀಶ್ ಜಿ.ಕೆ,
ಶೋಭ ಸತೀಶ್ ಇವರುಗಳು ಇದ್ದಾರೆ ಎಂದು ಶ್ರೀ ರವಿರಾಜ ಸಾಗರ ಅವರು ತಿಳಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.