ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾದೇವಿ ಮಠ, ಶ್ರೀ ದುರ್ಗಾದೇವಿ ದೇವಸ್ಥಾನ, ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಕೆರೆ ತುಂಬಿದ ಪ್ರಯುಕ್ತ ಗ್ರಾಮದ ರೈತರು, ಗುರುಹಿರಿಯರು, ಪೂಜ್ಯರು, ಗ್ರಾಮ ಪಂಚಾಯತಿ ಅದ್ಯಕ್ಷರು,ಸದಸ್ಯರು, ಶಿವಾನುಭವ ಸೇವಾ ಸಮಿತಿ ಅಧ್ಯಕ್ಷರು,ಸದಸ್ಯರು, ಮಹಿಳೆಯರು, ಸುಮಂಗಳೆಯರು ಸೇರಿಕೊಂಡು ಭಕ್ತಿ, ಭಾವದಿಂದ ಪೂಜೆ ಸಲ್ಲಿಸಿ, ಸದಾಕಾಲ ಉತ್ತಮ ಮಳೆ ,ಬೆಳೆ,ಸಂಪತ್ತು ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿ, ಗಂಗಾಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
