ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದ ಎಸ್,ಬಿ,ಐ ಬ್ಯಾಂಕಿನ ಎ.ಟಿ.ಎಂ ಕಳೆದ 8 ತಿಂಗಳಿಂದ ಕೆಟ್ಟು ಹೋಗಿದೆ.ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ ಸರಿಪಡಿಸುವಂತೆ ಅರಸಕೆರೆ ಶಾಖೆಯ ಮ್ಯಾನೇಜರ್ ರವರಿಗೆ ಗ್ರಾಹಕರು ಮನವಿಯನ್ನು ಮನವಿಯನ್ನು ಸಲ್ಲಿಸಿದ್ದಾರೆ.
ಅರಸಿಕೆರೆ ಗ್ರಾಮವು ಸುತ್ತಮುತ್ತಲಿನ ಗ್ರಾಮಗಳಿಗೆ ವಾಣಿಜ್ಯ ಕೇಂದ್ರವಾಗಿದೆ. ಮಂಗಳವಾರ ಸಂತೆ ನಡೆಯುವ ದಿನ, ಆಸ್ಪತ್ರೆಗೆ ರೋಗಿಗಳು ನೂರಾರು ಮಂದಿ ಬಂದು ಹೋಗುತ್ತಾರೆ ಆದರೆ ಎ.ಟಿ.ಎಂ ಸಹ ಮುಚ್ಚಿರುವುದರಿಂದ ಸುತ್ತಮುತ್ತಲಿನ ಕೊಡಿಗೆಹಳ್ಳಿ,ಎಸ್,ಆರ್ ಪಾಳ್ಯ, ನ್ಯಾಯದಗುಂಟೆ,ಜಂಗಮರಹಳ್ಳಿ ಕದಿರೆಹಳ್ಳಿ ಹಾಗೂ ಆಂದ್ರದ ಗಡಿ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತದೆ. ಬ್ಯಾಂಕ್ ಕಾರ್ಯ ನಿರ್ವಹಿಸುವ ದಿನಗಳಂದು ಮಾತ್ರ ತೆರೆದು ರಜಾ ದಿನಗಲಿ ಎ.ಟಿ.ಎಂ ಬಾಗಿಲು ಮುಚ್ಚುತ್ತಿದ್ದಾರೆ ಜನರು ತುರ್ತು ಸಂದರ್ಭದಲ್ಲಿ ಖಾಸಗಿ ಸೇವಾ ಕೇಂದ್ರ ಹಾಗೂ ಕಂಪ್ಯೂಟರ್ ಸೆಂಟರ್ ಗಳಲ್ಲಿ ಕಮಿಷನ್ ನೀಡಿ ಹಣ ಪಡೆಯಬೇಕಿದೆ ಎಂದು ಗ್ರಾಮಸ್ಥರು ಆರೋಪವಾಗಿದೆ ಹಿರಿಯ ನಾಗರೀಕರು ಅಲೆದಾಡುವಂತಾಗಿದೆ ಎ.ಟಿ.ಎಂ ಸೇವೆಯನ್ನು ಸರಿಪಡಿಸಿ ಎಂದು ಮನವಿ ಸಲ್ಲಿಸಿದ್ದಾರೆ.
ವರದಿ.ಕೆ. ಮಾರುತಿ ಮುರಳಿ