ರಾಯಚೂರು:ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದೆ ಹಬ್ಬದಲ್ಲಿ ಪಿಓಪಿ ಗಣಪತಿ ಮೂರ್ತಿಗಳನ್ನು ಬಳಸದೆ ಮಣ್ಣಿನಿಂದ ತಯಾರಿಸಿದ ಹಾಗೂ ವೃಕ್ಷ ಗಣಪತಿಗಳನ್ನು ಬಳಸಿ ಎಲ್ಲರೂ ಪರಿಸರ ಪ್ರಜ್ಞೆ ಬೆಳಸಿಕೊಳ್ಳಬೇಕು ಎಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ (ರಿ).ರಾಜ್ಯ ಘಟಕ ರಾಯಚೂರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಮನವಿ ಮಾಡಿದರು.
ಸಿಂಧನೂರು ನಗರದ ವಾರ್ಡ ನಂಬರ್ 1ರ ನಟರಾಜ ಕಾಲೋನಿಯ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಪಿಓಪಿ ಗಣಪತಿ ಮೂರ್ತಿಗಳನ್ನು ಬಳಸುವುದರಿಂದ ಪರಿಸರಕ್ಕೆ ತುಂಬಾ ಹಾನಿಯಾಗುತ್ತದೆ ಜೊತೆಗೆ ಇವುಗಳನ್ನು ನೀರಿನಲ್ಲಿ ವಿಸರ್ಜಿಸುವಾಗ ಅಲ್ಲಿರುವ ಜಲಚರ ಪ್ರಾಣಿಗಳ ಜೀವ ಜಂತುಗಳ ಪ್ರಾಣಕ್ಕೆ ಕುತ್ತು ಬರುತ್ತದೆ.ಮಣ್ಣಿನ ಗಣಪತಿಗಳನ್ನು ಬಳಸುವುದರಿಂದ ಅದು ನೀರಿನಲ್ಲಿ ಸಹಜವಾಗಿ ಕರಗಿ ಹೋಗುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸುವುದಿಲ್ಲ.ಸರ್ಕಾರ ಕೂಡಾ ಈಗಾಗಲೇ ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದೆ.ಸಾರ್ವಜನಿಕರು ದಯವಿಟ್ಟು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಲು ಮುಂದಾಗಬೇಕು.ಪ್ರತಿಯೊಬ್ಬ ನಾಗರಿಕರಿಗೂ ಇದರ ಬಗ್ಗೆ ಜಾಗೃತರಾಗಿರಬೇಕು ಎಂದು ಮನವಿ ಮಾಡಿದರು.