ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಂಭ್ರಮದಿಂದ ಜರುಗಿದ ಪತ್ರಿ ಗಿಡದ ಬಸವೇಶ್ವರ ಜಾತ್ರೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ಆರಾದ್ಯ ದೇವ ಪತ್ರಿಗಿಡದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಇತ್ತೀಚೆಗೆ ಸಡಗರ ಸಂಭ್ರಮದೊ೦ದಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನೆರವೇರಿತು.
ಈ ಜಾತ್ರಾ ಮಹೋತ್ಸವದಲ್ಲಿ ಮತ-ಬೇಧವಿಲ್ಲದೆ ಎಲ್ಲಾ ಸಮುದಾಯದವರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರುಶನ ಪಡೆದು ಪುನೀತರಾದರು. ಕಳೆದ ರವಿವಾರ ರಾತ್ರಿ ಗ್ರಾಮದ ಬಸಯ್ಯ ಹೊರಗಿನಮಠರವರ ಮನೆಯಿಂದ ವಾದ್ಯ ಮೇಳಗಳೊಂದಿಗೆ ಕಳಸ ಮೆರವಣಿಗೆ ನಡೆಯಿತು. ಸೋಮವಾರ ಮುಂಜಾನೆ ಬೆಳಗಿನ ಜಾವ ಕಳಸವನ್ನು ಶಿಖರಕ್ಕೆ ಏರಿಸಲಾಯಿತು. ಅಂದು
ಶ್ರೀ ಬಸವೇಶ್ವರನಿಗೆ ರುದ್ರಾಭಿಷೇಕ, ಮಂಗಳಾರತಿ, ಜಂಗಮ ಪ್ರಸಾದ, ಅನ್ನಸಂತರ್ಪಣೆ ಜರುಗಿತು. ಈ ಪ್ರಸಾದ ಕಾರ್ಯಕ್ರಮದಲ್ಲಿ ತಿಮ್ಮಾಪೂರ ಸೇರಿದಂತೆ ಗಂಗೂರ, ಕಿರಸೂರ, ಹಡಗಲಿ, ಚಿತ್ತರಗಿ, ಮೇದಿನಾಪೂರ, ಬೆಳಗಲ್ಲ ಗ್ರಾಮಗಳಲ್ಲದೆ ಹುನಗುಂದ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.ಮಂಗಳವಾರದ೦ದು ಶ್ರೀ ಬಸವೇಶ್ವರನಿಗೆ ಅಭಿಷೇಕ, ಮರಿಪ್ರಸ್ಥ ನಡೆಯಿತು. ನಂತರ ಕಳಸವನ್ನು ಇಳಿಸಲಾಯಿತು. ಸಕಲ ವಾಧ್ಯ ಮೇಳದೊಂದಿಗೆ ಕಳಸವನ್ನು ದೇವಸ್ಥಾನದಿಂದ ಗ್ರಾಮಕ್ಕೆ ತಂದು ಗ್ರಾಮದ
ಶ್ರೀ ಮಾರುತೇಶ್ವರ, ಶ್ರೀ ಬಸವೇಶ್ವರ, ಶ್ರೀ ದುರಗವ್ವ, ಶ್ರೀ ಹುಡೇದ ಲಕ್ಷ್ಮಿ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ,ಶರಣಯ್ಯ ಹೊರಗಿನಮಠರವರ ಮನೆಯಲ್ಲಿ ಆ ಕಳಸವನ್ನು ಇಡಲಾಯಿತು. ಹೊರಗಿನಮಠ ಮನೆಯವರು ವರ್ಷ ಪೂರ್ತಿ ಪೂಜೆ ಸಲ್ಲಿಸುತ್ತಿದ್ದಾರೆ.
ಜಾತ್ರೆ ನಿಮಿತ್ಯ ಗ್ರಾಮದಲ್ಲಿ ಎರಡು ದಿವಸ ಬಿಸುವುದು, ಕುಟ್ಟುವದು, ರೊಟ್ಟಿ ಬಡೆಯುವದು, ಎತ್ತು ಹೂಡುವುದು ಹಾಗೂ ಹೊಸ ಕಾರ್ಯ ಮಾಡುವುದರ ಮೇಲೆ ಹೇರಲಾಗಿದ್ದ ಬಂಧಕ್ಕೆ ತೆರೆ ಎಳೆಯಲಾಯಿತು. ಜಾತ್ರೆ ನಿಮಿತ್ಯ ರವಿವಾರ ನಡೆದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಭಜನಾ ಮಂಡಳಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿಯಿಡಿ ಭಜನಾ ಸೇವಾ ಮಾಡಲಾಯಿತು. ಇದರೊಂದಿಗೆ ಪತ್ರಿಗಿಡದ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ