ತುಮಕೂರು ಜಿಲ್ಲೆಯ ಪಾವಗಡ ಪುರಸಭೆ ನೂತನ ಅಧ್ಯಕ್ಷರಾದ ಪಿ. ಎಚ್. ರಾಜೇಶ್ ರವರು ನಿಡಗಲ್ಲು ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿ ನಿಡಗಲ್ ದುರ್ಗದ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮದ ಅಭಿವೃದ್ಧಿಗೆ ಶಾಸಕರ ಸಹಾಯ ಸಹಕಾರ ಪಡೆದು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ಪುರಸಭೆ ಸದಸ್ಯರ ತೆಂಗಿನಕಾಯಿ ರವಿ. ಡಿಸಿಸಿ ಬ್ಯಾಂಕ್ ಶ್ರೀನಿವಾಸ್,ಪಾಳೇಗಾರ್ ಲೋಕೇಶ್, ಚಿತ್ತ ಗಾನಹಳ್ಳಿ ಚಂದ್ರು,ಓಂಕಾರ್ ನಾಯಕ,ತಿಮ್ಮಯ್ಯ,ರಾಮಪ್ಪ,ಪಾಲ್ಗುಣ,ಮಹಾರಾಜ,ಜಗದೀಶ್,ಹನುಮಂತರಾಯ,ರಾಮಕೃಷ್ಣ,ಮುಂತಾದವರು ಹಾಜರಿದ್ದರು.
ವರದಿ: ಕೆ. ಮಾರುತಿ ಮುರಳಿ