ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ನೂತನ ಎಸ್.ಡಿ.ಎಂ.ಸಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ನೀಲಪ್ಪ ತಾವರಗೇರಾ, ಉಪಾಧ್ಯಕ್ಷರಾಗಿ ದೇವಮ್ಮ ಗಂಡ ನಾಗಪ್ಪ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಮಲ್ಲಪ್ಪ ಬಾದರ್ಲಿ ತಿಳಿಸಿದ್ದಾರೆ.
ಇಂದು ಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆ ಕುರಿತು ನಡೆದ ಅಂತಿಮ ಸಭೆಯಲ್ಲಿ ಹಾಜರಿದ್ದ ಶಾಲಾ ಮಕ್ಕಳ ತಂದೆ ಮತ್ತು ತಾಯಂದಿರ ಸಮ್ಮುಖದಲ್ಲಿ ಸಮಿತಿಯನ್ನು ರಚಿಸಲಾಯಿತು. ಸದಸ್ಯರಾಗಿ ಪಂಪಾಪತಿ ಕಲಕೇರಿ, ಚಾಂದ್ ಬಿ ಗಂಡ ಗಯಾಸಾಬ್, ಶರಣಪ್ಪ ಲಿಂಗದಳ್ಳಿ, ವಿರುಪಣ್ಣ ತಾವರಗೇರಾ, ಮಹಾದೇವಿ ಕಂದಕೂರ, ದೊಡ್ಡ ಮಲ್ಲಪ್ಪ ನಾಯಕ್, ಲಚಮಪ್ಪ ಬೇರ್ಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಪೋಷಕರು, ಗ್ರಾಮದ ಹಿರಿಯರಾದ ಪೋಸ್ಟ್ ಶರಣೇಗೌಡ ಹಳೆಮನಿ, ಮಾಜಿ ಅಧ್ಯಕ್ಷರಾದ ವಿಶ್ವನಾಥ್ ರೆಡ್ಡಿ, ಹಿರಿಯರಾದ ಶಾಮಣ್ಣ, ಯುವಕರಾದ ಶಶಿಕುಮಾರ್ ನಾಯಕ್, ಶರಣಬಸವ ಹೊಸಮನಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಭಾಷಾ ಸಾಬ್ ಮೂಲಿಮನಿ, ಗ್ರಾಮದ ಹುಸೇನಪ್ಪ ಚಳಗೇರಾ,ರಾಮಣ್ಣ ಬಡಿಗೇರ್,ಡಿ.ಕೆ ದುರುಗೇಶ್ ಸೇರಿದಂತೆ ಇತರರು ಹಾಜರಿದ್ದರು. ಶಿಕ್ಷಕರಾದ ವೀರೇಶ ಗೋನವಾರ, ಸುಭಾಷ್ ಚಂದ್ರ ಪತ್ತಾರ್, ಎಂ ಮಾರುತಿ ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
