ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ದನ್ನೂರ (ಆರ್) ಗ್ರಾಮದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಬೀದರ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ವಿಸ್ತೀರ್ಣ ಕೇಂದ್ರ ಉದ್ಘಾಟನೆ ಮಾಡಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಹುಮ್ನಾಬಾದ್ ಶಾಸಕರಾದ ಶ್ರೀ ಸಿದ್ಧಲಿಂಗಪ್ಪ ಪಾಟೀಲ್ ಹಾಗೂ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಖೇಳಗಿ (ಬಿ) ಮತ್ತು ಗ್ರಾಂ.ಪಂಚಯತ್ ಸದಸ್ಯರಾದ ಶ್ರೀ ನೀಲಕಂಠ ಎಂ , ಶ್ರೀಮತಿ ಪದ್ಮಾವತಿ ಶಿವಲಿಂಗಯ್ಯ ಸ್ವಾಮಿ, ರಾಚಣ್ಣ ಸಾಹುಕಾರ್, ಸಂಗಮ್ ತಿಪ್ಪಣ್ಣ, ಅನಿತಾ ಶರಣಪ್ಪಾ ಮತ್ತು ಮುಖಂಡರಾದ ಆಕಾಶ್ ಪಾಟೀಲ್ ಹಾಗೂ ಗ್ರಾಮದ ಅನೇಕ ಗಣ್ಯರು, ಹಿರಿಯರು ಮತ್ತು ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಸಂದೀಪ್ ಕುಮಾರ್