ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸುವಂತೆ
ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಮಂಡಳಿ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ಹಿರೇಮಲ್ಲೂರ ಗ್ರಾಮದ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆಯನ್ನಾಗಿ ಮಾಡಲಾಗಿದೆ ಪ್ರೌಢಶಾಲೆಗೆ ಹೊಸ ಮುಖ್ಯೋಪಾಧ್ಯಾಯರನ್ನು ನೇಮಕ ಮಾಡಲಾಗಿದೆ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದ ಶೈಲಜಾ ಟಿ. ಸಹ ಶಿಕ್ಷಕರೊಂದಿಗೆ ಅಸಹಕಾರವಾಗಿ ಮತ್ತು ವಿದ್ಯಾರ್ಥಿಗಳೊಂದಿಗೆ ವಿನಾಕಾರಣ ವಾಗ್ವಾದ ಮಾಡುತ್ತಿದ್ದು ಇದರಿಂದ ಶಾಲೆಯ ವಾತಾವರಣ ಹದಗೆಡುವಂತಾಗಿತ್ತು ಹೀಗಾಗಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆಗಸ್ಟ್ 29 ಪಾಲಕರ ಸಭೆ ಕರೆದು ಸಮಸ್ಯೆ ಬಗ್ಗೆ ಹರಿಸಿ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಹೊತ್ತು ನೀಡುವಂತೆ ಗ್ರಾಮಸ್ಥರಿಂದ ಶಿಕ್ಷಕರಿಗೆ ಸೂಚನೆ ನೀಡಲಾಗಿತ್ತು.
ದಿ.30-08-2024 ರ ಗುರುವಾರ ಹಮ್ಮಿಕೊಂಡ ಸಭೆಯಲ್ಲಿ ಮುಖ್ಯ ಶಿಕ್ಷಕಿ ಶೈಲಜಾ ಟಿ. ಅವರ ಪತಿ ಶಾಲೆಗೆ ಬಂದು ಪಾಲಕರಿಗೆ,ಎಸ್‌ಡಿಎಂಸಿ ಸದಸ್ಯರಿಗೆ, ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ಕ್ಯಾತೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ಶಾಲೆಗೆ ಸಂಬಂಧವಿಲ್ಲದ ವ್ಯಕ್ತಿ ಶಾಲೆಯ ಆವರಣದಿಂದ ಹೊರ ನಡೆಯುವಂತೆ ಗ್ರಾಮಸ್ಥರು ಹೇಳಿದರು.
ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅವರ ಪತಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹೀಗೆ ಶಾಲೆ ವಾತಾವರಣ ಹಾಳಾಗುತ್ತಿದೆ ಎಂದು ಈ ತಕ್ಷಣದಿಂದಲೇ ವರ್ಗಾವಣೆ ಮಾಡುವಂತೆ ಎಸ್‌ಡಿಎಂಸಿ ಅಧ್ಯಕ್ಷರು ,ಗ್ರಾಮಸ್ಥರು ಗ್ರಾಮ ಪಂಚಾಯತಿಯ ಸದಸ್ಯರು ಮಳೆಯನ್ನು ಲೆಕ್ಕಿಸದೆ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಮನವಿಯನ್ನು ಶಿಕ್ಷಣ ಇಲಾಖೆ ಅಧಿಕಾರಿ (ಬಿಇಒ) ಅಂಬಿಗೇರ್ ಸ್ವೀಕರಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮನಗೌಡ ಕರಿಗೌಡ್ರ,ಎಸ್ ಬಿ ಎಂ ಸಿ ಅಧ್ಯಕ್ಷ ಫಕ್ಕೀರೇಶ ವಾಲ್ಮೀಕಿ, ಸಂತೋಷ್ ದೊಡ್ಮನಿ, ಇಮಾಮ್ ಸಾಬ್ ನದಾಫ್, ಈಶ್ವರ್ ಹುತ್ತನಗೌಡ್ರ, ಲಕ್ಷ್ಮಣ್ ಮಡಿವಾಳ, ಅಶೋಕ್ ಬೂದ್ನೂರ್, ಮೌಲಾಸಾಬ್ ಕಟಿಗಿ,ಪ್ರಕಾಶ್ ಕ್ಯಾಲ್ಕುಂಡ,ಎಲ್ಲಪ್ಪ ಮ್ಯಾಗೇರಿ,ಶಿವರಾಜ್ ಬೋರಣ್ಣವರ್, ಮಂಜು ಬೂದನೂರು,ನೀಲಪ್ಪ ಹರಿಜನ್, ಕುಮಾರ್ ಶಿರೂರು, ದೇವಪ್ಪ ಮ್ಯಾಗೇರಿ ಮುಂತಾದ ಮುಖಂಡರು ಉಪಸ್ಥಿತರಿದ್ದರು.
ವರದಿ ಮಂಜುನಾಥ ಪಾಟೀಲ