ಪಾವಗಡ:ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ನಿಡಗಲ್ಲು ಸಂಸ್ಥಾನದ ಆಶ್ರಮದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಮಾತನಾಡಿ ಶ್ರಾವಣ ಮಾಸದ ಕೊನೆಯ ಸೋಮವಾರ ದಿನಾಂಕ 2 /9/ 2018 ಸೋಮವಾರದಂದು ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ಹಾಗೂ ವಾಲ್ಮೀಕಿ ಜಾಗೃತಿ ವೇದಿಕೆ ವತಿಯಿಂದ ಗ್ರಾಮಸ್ಥರ ಸಹಕಾರದೊಂದಿಗೆ ನಿಡಗಲ್ಲು ಉತ್ಸವವನ್ನು ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ತ ನಿಡಗಲ್ ದುರ್ಗದ ಅಭಿಮಾನಿಗಳು ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ವಾಲ್ಮೀಕಿ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಪಾಳೇಗಾರರು ಮಾತನಾಡಿ ನಿಡಗಲ್ಲು ಐತಿಹಾಸಿಕ ನಿಡುಗಲ್ಲು ದುರ್ಗದ ಉತ್ಸವವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲು ಒತ್ತಾಯಿಸುತ್ತಾ ಪ್ರತಿ ವರ್ಷ ನಿಡಗಲ್ ದುರ್ಗದ ಉತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಅದೇ ರೀತಿ ಈ ಬಾರಿ ಅದ್ದೂರಿಯಾಗಿ ಆಚರಿಸುತ್ತಿದ್ದು ನಿಡಗಲ್ಲು ಉತ್ಸವಕ್ಕೆ ಮಾನ್ಯ ಶಾಸಕರು ಸಂಸದರು ವಿಧಾನ ಪರಿಷತ್ ಸದಸ್ಯರು ಮಾಜಿ ಸಚಿವರು ಮಾಜಿ ಶಾಸಕರು ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸುತ್ತಿದ್ದು ನಿಡಗಲ್ಲು ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮದಿಂದ ಗ್ರಾಮದ ಪ್ರಮುಖ ರಾಜ ಬೀದಿಯಲ್ಲಿ ಮೆರವಣಿಗೆಯೊಂದಿಗೆ ವಿವಿಧ ಕಲಾತಂಡಗಳೊಂದಿಗೆ ವಾದ್ಯ ಮೇಳಗಳೊಂದಿಗೆ ಉತ್ಸವದ ಮೆರವಣಿಗೆ ನಡೆಯುತ್ತದೆ ಉತ್ಸವ ಕಾರ್ಯಕ್ರಮವು ನಿಡಗಲ್ಲು ಪವಿತ್ರ ಪುಣ್ಯಕ್ಷೇತ್ರ ಶ್ರೀರಾಮ ತೀರ್ಥಹಳ್ಳಿ ನಡೆಯುತ್ತದೆ ಎಂದು ತಿಳಿಸಿ ಸಮಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿಜಮ್ಮ ,ಶಿವಣ್ಣ,ಕರವೇ ಲಕ್ಷ್ಮೀನಾರಾಯಣ,ಪ್ರಥಮ ದರ್ಜೆ ಗುತ್ತಿಗೆದಾರರಾದ ಮಂಜುನಾಥ್ ಎಂ, ಓಂಕಾರ ನಾಯಕ,ಭಾಸ್ಕರ ನಾಯಕ್, ಜಗದೀಶ್ ,ಪಾಲಾಕ್ಷ ,ತಿಮ್ಮಯ್ಯ ,ಶಿವು ,ಮಣಿ , ಬಲರಾಮ್ ಮುಂತಾದವರು ಹಾಜರಿದ್ದರು.
ವರದಿ. ಕೆ. ಮಾರುತಿ ಮುರಳಿ