ವಿಜಯಪುರ:ನರಸಲಗಿ ಗ್ರಾಮದ ಸಮಾಜ ಸೇವಕರಾದ ಶ್ರೀ ಮಾರುತಿ ಬಾಬು ನಲವಡೆಯವರು ನರಸಲಗಿ ಗ್ರಾಮ್ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟಬುಕ್ ಹಾಗೂ ಪೆನ್ನು ಗಳನ್ನು ವಿತರಿಸಿದರು.
ಹಲವಾರು ರೀತಿಯ ಸಮಾಜ ಸೇವೆಯಲ್ಲಿ ತೊಡಗಿದ ಇವರು ಪ್ರತಿವರ್ಷ ವಿಜಯಪುರದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಊಟದ ವ್ಯವಸ್ಥೆಯನ್ನು ಮಾಡುವರು, ಕಳೆದ ವರ್ಷ ಪ್ರವಾಹದ ಸಂಧರ್ಭದಲ್ಲಿ ಪ್ರವಾಹ ಸಂತ್ರಸ್ತರಿಗೆ ಅನ್ನದಾನದ ಸೇವೆಯನ್ನು ಒದಗಿಸಿದರು. ಪ್ರತಿವರ್ಷ ಪಲ್ಲಕ್ಕಿ ಸೇವೆ ಮಾಡುತ್ತಾ ಸುಕ್ಷೇತ್ರ ಯಲಗೂರ ಆಂಜನೇಯನ ದರ್ಶನಕ್ಕೆ ಹೋಗಿ ಬರುವ ಭಕ್ತರಿಗೆ ಊಟ, ಉಪಹಾರದ ಸೇವೆ ಒದಗಿಸುವರು,ಯಾರೆ ಆಗಲಿ ನಾವೂ ಒಂದು ಕಾರ್ಯಕ್ರಮ ಮಾಡುತ್ತಿದ್ದೇವೆ ಅದಕ್ಕೆ ನಿಮ್ಮ ಸಹಾಯ ಬೇಕು ಎನ್ನುವುದಷ್ಟೆ ತಡ, ಆಗಲಿ ಎಂದು ಭರವಸೆ ನೀಡಿ ಧೈರ್ಯ ತುಂಬುವ ಕೈಗಳು ಇವರದು. ಗ್ರಾಮದಲ್ಲಿನ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ತಮ್ಮ ಪೆಂಡಾಲ ಸೇವೆ ಒದಗಿಸಿ ಭಕ್ತಿ ಮೆರೆದವರು. ಇನ್ನೂ ಹತ್ತು-ಹಲವಾರು ದಾನ-ಧರ್ಮಗಳನ್ನು ಮಾಡಿದ ಹೃದಯವಂತರಿವರು. ಇದೇ ರೀತಿ ಇನ್ನೂ ಹೆಚ್ಚು ಸಾಮಾಜಿಕ ಕಾರ್ಯಗಳನ್ನು ಮಾಡಲು ಆ ಭಗವಂತ ಅವರಿಗೆ ಹೆಚ್ಚು ಆಯುಷ್ಯ, ಆರೋಗ್ಯವನ್ನು ನೀಡಲಿ ಎಂದು ಮಕ್ಕಳು ಶುಭಕೋರಿದರು.
ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಮುಖ್ಯಗುರುಗಳು, ಸಿಬ್ಬಂದಿ ವರ್ಗ, ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಊರಿನ ಮುಖಂಡರು ಸೇರಿ ಪುಸ್ತಕಗಳನ್ನು ವಿತರಿಸಿದರು. ಸಂಗಮೇಶ ತಾಳಿಕೋಟಿ ಮಾರುತಿ ನಲವಡೆ ಅವರ ಸಮಾಜ ಸೇವೆ ಕುರಿತು ಮಾತನಾಡಿದರು.
ವರದಿ-ಆಕಾಶ ಹೂಗಾರ