ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 2023-34ನೇ ಸಾಲಿನ 15ನೇ ಹಣಕಾಸು ಸಾಮಾಜಿಕ ಲೆಕ್ಕಪರಿಶೋಧನೆ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.
ನರೇಗಾ ಸಾಮಾಜಿಕ ಲೆಕ್ಕ ಪರಿಶೋಧಕ ನಾರಾಯಣ್ ಅವರು ಮಾತನಾಡಿ ದಿನ್ನಳ್ಳಿ ಗ್ರಾಮದಲ್ಲಿ 925 ಜಾಬ್ ಕಾರ್ಡ್ ಗಳಿವೆ, ಜಾಬ್ ಕಾರ್ಡ್ ಉಳ್ಳವರು ನರೇಗಾ ಯೋಜನೆಯಲ್ಲಿ ಕಾಮಗಾರಿ ನಿರ್ಮಾಣ ಮಾಡಲು ಇಚ್ಚಿಸುವವರು ತಮ್ಮ ಸೂಕ್ತ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಸಲ್ಲಿಸಿ ನರೇಗಾ ಯೋಜನೆಯಲ್ಲಿ ಕಾಮಗಾರಿ ನಿರ್ಮಾಣ ಮಾಡಬಹುದು. 2023-34ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು 15ನೇ ಹಣಕಾಸಿನ ಆಯ ವ್ಯಯವನ್ನು ಗ್ರಾಮ ಸಭೆಯಲ್ಲಿ ಮಂಡಿಸಿದರು.
ನರೇಗಾ ಯೋಜನೆ ಕಾಮಗಾರಿಯಲ್ಲಿ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ, ಸೇರಿದಂತೆ 131 ಕಾಮಗಾರಿಗಳು ನಡೆದಿದೆ, ಇದಕ್ಕೆ 2,054,9915 ಕೋಟಿ ರೂಪಾಯಿಯ ಕಾಮಗಾರಿ ನಡೆದಿದೆ ಎಂದರು.
ಪಿಡಿಒ ಸುರೇಶ್ ಮಾತನಾಡಿ ದಿನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಮೀನುಗಳ ಖಾತೆದಾರರ ಸಂಖ್ಯೆ ಕಮ್ಮಿ ಹೆಚ್ಚಾಗಿ ಅರಣ್ಯ ಪ್ರದೇಶದಿಂದ ಕೂಡಿದೆ, ಅಂತ ಜಮೀನಿನಲ್ಲಿ ಕೆರೆ,ಚಿಕ್ಕಡ್ಯಾಮ್ ನಿರ್ಮಿಸಲು ಅರಣ್ಯ ಇಲಾಖೆಯವರ ಅನುಮತಿ ಪಡೆದು ಕಾಮಗಾರಿ ಮಾಡಬೇಕು ಎಂದರು.
ನಮ್ಮ ಗ್ರಾಮ ಪಂಚಾಯತಿಯಲ್ಲಿ ಶೌಚಾಲಯನಿರ್ಮಾಣ, ಜಮೀನು ಮಟ್ಟ, ಕಲ್ಪಿಚಿಂಗ್, ಸೋಫಾ ಪಿಟ್, ಸಿಸಿ ರಸ್ತೆ, ಚರಂಡಿ, ಒಕ್ಕಣೆಕಳ, ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ದನದ ಕೊಟ್ಟಿಗೆ, ಇನ್ನಿತರೆ ಸೌಲಭ್ಯಗಳಿವೆ ನಮ್ಮ ಪಂಚಾಯಿತಿಯ ವ್ಯಾಪ್ತಿಯ ಸಾರ್ವಜನಿಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಶಿಕ್ಷಣ ಇಲಾಖೆಯ ಅಶೋಕ್, ಸದಸ್ಯರಾದ ನವಾಬ್, ಕೃಷ್ಣನಾಯ್ಕ, ಸರೋಜಭಾಯಿ, ಮಾಜಿ ಅಧ್ಯಕ್ಷ ಮುರುಗೇಶ್,ಅರಣ್ಯ ಇಲಾಖೆಯ ವಿನಾಯಕ, ಸುರೇಶ್,ಗ್ರಾ.ಪಂ. ಕಾರ್ಯದರ್ಶಿ ಶ್ರೀನಿವಾಸ್, ಮತ್ತು ಸಿಬ್ಬಂದಿ ನೌಕರರು, ಹಾಗೂ ಸಾರ್ವಜನಿಕರು ಇದ್ದರು.
ವರದಿ :ಉಸ್ಮಾನ್ ಖಾನ್