ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗಣೇಶೋತ್ಸವ ಶಾಂತಿ ಸಭೆ, ಒತ್ತಾಯದ ವಸೂಲಿ ನಿಯಂತ್ರಿಸಿ- ಹೋರಾಟಗಾರರ ಒತ್ತಾಯ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆ30ರಂದು, ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸ್ ಇಲಾಖೆ ಹಾಗೂ ವಿವಿದ ಇಲಾಖೆಗಳ ನೇತೃತ್ವದಲ್ಲಿ, ಸಾರ್ವಜನಿಕರನ್ನೊಳಗೊಂಡ ಸೌಹಾರ್ದ ಶ‍ಾಂತಿ ಸಭೆ ಜರುಗಿತು. ಸಭೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿ ಹೆಚ್.ವೀರಣ್ಣ ಮಾತನಾಡಿ, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಗಳಲ್ಲಿ ಗಣೇಶೋತ್ಸವ ನಿಮಿತ್ತ ಕೆಲ ಆಯೋಜಕರು, ಸಾರ್ವಜನಿಕರಿಂದ ,ವರ್ತಕರಿಂದ ಒತ್ತಾಯಿಸಿ ದೇಣಿಗೆ ಹಣ ವಸೂಲಿ ಮಾಡಲಾಗುತ್ತಿದೆ. ಮತ್ತು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಯುವಕರು, ಉತ್ಸವ ದೇಣಿಗೆ ಹಣಕ್ಕಾಗಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟುತ್ತಿದ್ದಾರೆ. ಇದು ಸಲ್ಲದು ಸಮಾಜದ ಆರೋಗ್ಯಕರ ಬೆಳವಣಿಗೆ ಅಲ್ಲ, ಇದರಿಂದ ಅಪಘಾತಗಳು ಅವಘಡಗಳು ಗಲಭೆಗಳು ಸೃಷ್ಠಿಯಾಗೋ ಸಾಧ್ಯತೆ ಇರುತ್ತದೆ. ಗಣೇಶೋತ್ಸವದಲ್ಲಿ ಸರ್ವರಲ್ಲೂ ಸಂಭ್ರಮ ಸಡಗರ ಇಮ್ಮಡಿಗೊಳಿಸುವ ವಾತಾವರಣ ನಿರ್ಮಾಣವಾಗಬೇಕೆ ಹೊರತು, ಆಡಂಬರ ಗಲಭೆ ದೊಂಬಿಯಿಂದ ಸಮಾಜದ ಅಶಾಂತಿ ಉಂಟಾಗಬಾರದು ಗಣೇಶೋತ್ಸವ ಕಾನೂನು ಸುವ್ಯವಸ್ಥೆ ಕೆಡುವುದಕ್ಕೆ ಸಾಕ್ಷಿಯಾಗಬಾರದು, ಸಮಾಜದಲ್ಲಿ ಗುಂಪು ಘರ್ಷಣೆ ಉಂಟು ಮಾಡುವುದಕ್ಕೆ ಸಹಕಾರವಾಗಬಾರದು. ಕಾರಣ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆಯವರು, ಸಾಮಾಜಿಕ ಶಾಂತಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಜಾಗ್ರತೆ ವಹಿಸಬೇಕಿದೆ ಮೊದಲು ಒತ್ತಾಯದ ದೇಣಿಗೆ ವಸೂಲಿ ಮಾಡೋದನ್ನ ನಿಯಂತ್ರಿಸಬೇಕಾಗಿದೆ, ಅದಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕೆಂದು ಅವರು ಕೋರಿದರು.
ಆರಕ್ಷಕ ಜಿಲ್ಲಾ ಉಪ ಅಧೀಕ್ಷಕರಾದ ಅಲಾಂ ಫಾಷಾರವರು ಮಾತನಾಡಿ, ಉತ್ಸವದ ನೆಪದಲ್ಲಿ ಕಾನೂನು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಲ್ಲಿ ನಿರ್ಧಾಕ್ಷಿಣ್ಯ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಮುಖಂಡರು ತಮ್ಮ ತಮ್ಮ ಮಕ್ಕಳಿಗೆ ಯುವಕರಿಗೆ, ಸೂಕ್ತ ರೀತಿಯಲ್ಲಿ ಬುದ್ದಿ ಹೇಳಿ ಸರಿದಾರಿಗೆ ತರಬೇಕಿದೆ, ನಿರ್ಲಕ್ಷ್ಯ ತೋರಿ ಸಾಮಾಜಿಕ ನೆಮ್ಮದಿಗೆ ಧಕ್ಕೆ ತಂದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ,ಗಣೇಶೋತ್ಸವ ಸೌಹಾರ್ದತೆ ಆಧ್ಯತ್ಮಿಕತೆ ಒಗ್ಗಟ್ಟು ಶಾಂತಿ ನೆಮ್ಮದಿ ಸಮಾಜದಲ್ಲಿ ಸಡಗರ ಸಂಭ್ರಮ, ಹರ್ಷದ ವಾತಾವರಣ ನಿರ್ಮಿಸುವ ರೀತಿಯಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಜರುಗಿಸಬೇಕಿದೆ ಎಂದರು. ಸಿ. ಪಿ ಐ ಸುರೇಶ ಮಾತನಾಡಿ ಅನೇಕ ವರ್ಷಗಳಿಂದ ಗಣೇಶ ಉತ್ಸವ ಆಚರಿಸುತ್ತಾ ಬರಲಾಗುತ್ತಿದೆ ಅದರಂತೆ ಎಲ್ಲಾ ಸಮಾಜದವರು ಪರಸ್ಪರ ಅನ್ನೋನ್ಯತೆಯಿಂದ, ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ.
ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು, ಉತ್ತಮ ಸಂದೇಶ ಸಾರುವ ರೀತಿಯಲ್ಲಿ ಆಚರಿಸಬೇಕಿದೆ ಯಾವುದೇ ಅಹಿತರ ಘಟನೆಗೆ ಕಾರಣವಾಗದಂತೆ ಎರಡೂ ಹಬ್ಬಗಳನ್ನು ಆಚರಿಸಬೇಕು ಎಂದರು. ಧಾರ್ಮಿಕ ನೆಲೆಗಟ್ಟಿನಲ್ಲಿ ಶಾಂತಿ ಸುವ್ಯವಸ್ಥೆಯಿಂದ ಹಬ್ಬ ಆಚರಿಸಬೇಕಿದೆ, ಅಗತ್ಯ ಸಹಕಾರವನ್ನು ಇಲಾಖೆ ನೀಡಲಿದೆ. ಹಬ್ಬದ ಸಂದರ್ಭದಲ್ಲಿ ಶಾಂತಿಗೆ ಭಂಗ ತರುವ ಯತ್ನ ಮಾಡಿದಲ್ಲಿ, ಅಂಥವರ ವಿರುದ್ದ ಇಲಾಖೆ ನಿರ್ಧಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು. ಕೂಡ್ಲಿಗಿ ಡಿ.ವೈ.ಎಸ್ಪಿ ಮಲ್ಲೇಶಪ್ಪ ವಿ ಮಲ್ಲಾಪುರ ರವರು, ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ವಿವೇಕ‍ಾನಂದ, ದಲಿತ ಮುಖಂಡ ಎಸ್.ದುರುಗೇಶ, ಪಟ್ಟಣ ಪಂಚಾಯ್ತಿ ಸ್ಥಾಯಿ ಸಮತಿ ಅಧ್ಯಕ್ಷ ಶುಕೂರ್, ಗಣೇಶೋತ್ಸವ ಸಮಿತಿಯ ಜೂಗುಲರ ಭರತ್, ಇನ್ನೂ ಮುಂತಾದವರು ಮಾತನಾಡಿದರು. ಪಿಎಸ್‌ಐ ಪ್ರಕಾಶ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಕೂಡ್ಲಿಗಿ ಪೊಲೀಸ್ ಠಾಣೆಯ ಕೆಲ ಪೊಲೀಸ್ ಸಿಬ್ಬಂದಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ, ತಾಲೂಕು ಕಂದಾಯ ಇಲಾಖೆ, ತಾಲೂಕು ಪಂಚಾಯ್ತಿ ಜೆಸ್ಕಾಂ ಇಲಾಖೆ ಸೇರಿದಂತೆ. ವಿವಿದ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಯವರು ಸಭೆಯಲ್ಲಿ ಹಾಜರಿದ್ದರು. ಪಟ್ಟಣ ಸದಸ್ಯರು, ಪಟ್ಟಣದ ವಿವಿದ ಗಲ್ಲಿಗಳ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು. ಮುಸ್ಲಿಂ ಹಿಂದೂ ಕ್ರಿಶ್ಚಿಯನ್ ಸೇರಿದಂತೆ ವಿವಿದ ಧರ್ಮಗಳ ಮುಖಂಡರು, ವಿವಿದ ಸಮುದಾಯಗಳ ಪ್ರಮುಖರು. ಪತ್ರಕರ್ತರು, ಎಲ್ಲಾ ವಾರ್ಡ್ ಗಳ ಗಣೇಶೋತ್ಸವ ಕಮಿಟಿಗಳ ಸರ್ವ ಪದಾಧಿಕಾರಿಗಳು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ನಾಗರೀಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ