ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶನಿಮಹಾತ್ಮ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಶೀತಲಾಂಬ ಮತ್ತು ಶನಿಮಹಾತ್ಮ ವಿಶೇಷವಾದಂತಹ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.
ಕೊನೆ ಶ್ರಾವಣ ಶನಿವಾರವಾಗಿರುವುದರಿಂದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ.
ಸ್ವತಹ ಭಕ್ತಾದಿಗಳು ಮಾತಾಡಿ ನಾವು ಸುಮಾರು 25 ವರ್ಷಗಳಿಂದ ಈ ಶನಿ ದೇವರಿಗೆ ಪ್ರತಿ ವರ್ಷ ಬರ್ತಾ ಇದೀವಿ ನಮ್ಮ ಎಲ್ಲಾ ಮನೆಯ ಸಮಸ್ಯೆಗಳು ಸಂಪೂರ್ಣವಾಗಿ ಮುಕ್ತವಾಗಿವೆ ಎಂದು ಸ್ವತಃ ಭಕ್ತಾದಿಗಳು ಹೇಳಿದ್ದಾರೆ.
ನಂತರ ಶನಿಮಹಾತ್ಮ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀನಿವಾಸ್ ಮಾತಾಡಿ ಶನಿಮಹಾತ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಉಚಿತ ಅನ್ನಸಂತರ್ಪಣೆ ಮಾಡುತ್ತಿದ್ದೇವೆ ಹಾಗೂ ಮುಂದಿನಗಳಲ್ಲಿ ನಿರಂತರ ಅನ್ನ ದಾಸೋಹ ಮಾಡುತ್ತೇವೆ. ನಾವು ಈ ಒಂದು ಟ್ರಸ್ಟ್ ನಿಂದ ಸುಮಾರು ವರ್ಷಗಳಿಂದ ಪಾವಗಡದಲ್ಲಿ ವಿದ್ಯಾ ಸಂಸ್ಥೆಯನ್ನು ಸ್ಥಾಪನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಕೊಡುತ್ತಿದ್ದೇವೆ. ಅದರ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಶನಿಮಾತ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ ಅದೇ ಅಲ್ಲದೆ ದೇವರ ಕರುಣೆ ಇದ್ದಲ್ಲಿ ಪಟ್ಟಣದಲ್ಲಿ ವೃದ್ಧಾಶ್ರಮ ಮಾಡಬೇಕು ಇದೆ ಎಂದು ಹೇಳಿದರು.
ಶ್ರೀ ಜೈಷ್ಠಾದೇವಿ ಸಮೇತ ಶ್ರೀ ಶನಿದೇವರ ವಿಶೇಷ ಬೆಳ್ಳಿ ಪಲ್ಲಕ್ಕಿ ಉತ್ಸವ,ದಿವ್ಯ ಶ್ರವಣಾನಂದ ವಾದ್ಯಗೋಷ್ಠಿಗಳೊಂದಿಗೆ ವಿಜೃಂಭಣೆಯಿಂದ ನಡೆಸಲಾಗಿದೆ.
ವರದಿ ಪಾವಗಡ ಕೆ.ಮಾರುತಿ ಮುರಳಿ