ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಚೆಂದದ ಭಾವನೆಗಳ ಹಂದರ “ಭಾವ ಸುಗ್ಗಿ” ಕವನ ಸಂಕಲನ

ಕವಿ:ಬ್ಯಾಡನೂರು ವೀರಭದ್ರಪ್ಪ ಶಿವಶರಣ.ಎಸ್.

ಒಂದು ಸುಂದರವಾದ ಮತ್ತು ಆಕರ್ಷಕವಾದ ಮುಖಪುಟವನ್ನು ಹೊಂದಿರುವ ಮತ್ತು ಭಾವನೆಗಳನ್ನು ಬೆಸೆಯುವ ಚಂದದ ಭಾವನೆಗಳ ಬಂಧವೇ “ಬ್ಯಾಡನೂರು ವೀರಭದ್ರಪ್ಪ ಶಿವಶರಣರ” ಕವನ ಸಂಕಲನ “ಭಾವ ಸುಗ್ಗಿ”ಯಾಗಿದೆ .
ವೈವಿಧ್ಯಮಯವಾದ ವಿಚಾರಧಾರೆಗಳನ್ನು ಒಳಗೊಂಡಿರುವ 103 ಕವಿತೆಗಳ ಸುಂದರವಾದ ಭಾವನೆಗಳ ಹಂದರ ಈ ಕವನ ಸಂಕಲನವಾಗಿದೆಂದರೆ ತಪ್ಪಾಗಲಾರದು. ಖಾಸಗಿ ಬ್ಯಾಂಕಿನ ತಾತ್ಕಾಲಿಕ ಉದ್ಯೋಗಿಯಾಗಿರುವ, ಮೂಲತ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀಯುತ ಬ್ಯಾಡನೂರು ವೀರಭದ್ರಪ್ಪ ಶಿವಶರಣರು ಇಂದಿನ ಯುವ ಸಾಹಿತಿಗಳಲ್ಲಿ ಸರಳವಾದ ಪದಗಳಿಂದ ಅರ್ಥಪೂರ್ಣವಾದ ಕವನಗಳನ್ನು ರಚಿಸಿ ಒಬ್ಬ ಉದಯೋನ್ಮುಖ ಕವಿ ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ. “ಭಾವ ಸುಗ್ಗಿ” ಯು 103 ಕವನಗಳನ್ನು ಒಳಗೊಂಡಿದೆ. ಇದು ಇವರ ಎರಡನೇಯ ಕೃತಿಯಾಗಿದೆ. ಇವರ ಕವನಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರಚಲಿತ ಘಟನೆಗಳು ಮತ್ತು ಸಾಮಾಜಿಕ ಬದ್ಧತೆ ಎದ್ದು ಕಾಣುತ್ತವೆ.
ಈ ಕವನ ಸಂಕಲನದಲ್ಲಿ ಬಾಲ್ಯದ ಸಿಹಿಯಾದ ನೆನಪುಗಳು, ನಂಬಿಕೆ, ವಾಸ್ತವ್ಯದ ನೆಲಗಟ್ಟು, ಸುಖ ದುಃಖಗಳ ಅನುಭವ, ಹಳ್ಳಿ ಸೊಗಡಿನ ಸುಂದರ ಬದುಕಿನ ಚಂದದ ಭಾವನೆಗಳ ಅನಾವರಣಗೊಂಡಿವೆ .ನೊಂದ ಮನಸ್ಸುಗಳ ವೇದನೆ, ಸಾಮಾಜಿಕ ಅಸಮಾನತೆ, ನೋವು-ನಲಿವು ಮುಂತಾದ ಭಾವನೆಗಳನ್ನು ತಮ್ಮ ಕವನಗಳ ಸಾಲಿನಲ್ಲಿ ಸೆರೆ ಹಿಡಿಯುವಲ್ಲಿ ಕವಿಗಳು ಸಂಪೂರ್ಣವಾಗಿ ಯಶಸ್ವಿ ಕಂಡಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಕವನ ಸಂಕಲನದಲ್ಲಿ ಭ್ರಾತೃತ್ವ, ಸ್ನೇಹ, ಪ್ರೀತಿ ಪ್ರೇಮ, ಸಮಗ್ರತೆ, ಏಕತೆ ,ಪ್ರಕೃತಿಯ ಕಾಳಜಿ ಜೀವನದ ಸೋಲು ಗೆಲುವು, ಬಾಂಧವ್ಯದ ಬೆಸುಗೆ, ರೈತನ ಕಾಳಜಿ ,ನಾಡು ನುಡಿಯ ಪ್ರೇಮ ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನ ಶಿವಶರಣರು ಮಾಡಿದ್ದಾರೆ.
ಪ್ರಸ್ತುತ “ಭಾವ ಸುಗ್ಗಿ” ಕವನ ಸಂಕಲನದಲ್ಲಿ ಒಬ್ಬ ವ್ಯಕ್ತಿಯ ಬೌದ್ಧಿಕ ಮಾನಸಿಕ ಪ್ರಗತಿಗೆ ಪೂರಕವಾದ ಕವನಗಳು ಹೆಚ್ಚಾಗಿರುವುದು ಒಂದು ವಿಶೇಷವೆಂದು ಹೆಮ್ಮೆಯಿಂದ ಹೇಳಬಹುದಾಗಿದೆ.ಭಕ್ತಿಯ ನೆಲೆಗಟ್ಟಿನಲ್ಲಿ ಸಾಮಾಜಿಕ ಕಾಳಜಿಯ ಭಾವನೆಗಳು ನಾಡ ನುಡಿಯ ಸಡಗರ,ಜೀವನದ ಅನುಭವ, ಶರಣ ದಾಸರ ಸ್ಮರಣೆ ಸೃಜನಾತ್ಮಕ ರಚನಾತ್ಮಕ ವೈಚಾರಿಕ ಆಲೋಚನೆಗಳು ಇವರ ಕವನ ಸಂಕಲನದ ಮೂಲಸೆಲೆಯಾಗಿರುವುದು ಸಂತಸದ ವಿಷಯ.
103 ಕವನಗಳು ಒಂದರಕ್ಕಿಂತ ಒಂದು ವಿಭಿನ್ನವಾದ ಶೈಲಿಯಲ್ಲಿ ರಚನೆಗೊಂಡಿದೆ. ” ವಿದ್ಯಾ ಗಣಪತಿ” ಸ್ತುತಿಯೊಂದಿಗೆ ಆರಂಭವಾಗುವ ಈ ಕವನ ಸಂಕಲನ “ಈ ನಾಡು ದೇವಾಲಯ” ಎನ್ನುವ ಕವನದೊಂದಿಗೆ ಮುಕ್ತಾಯವಾಗುತ್ತದೆ. ನೊಂದು ಬೆಂದ ಮನಕ್ಕೆ ಕವಿಯ ಧೈರ್ಯದ ಮಾತುಗಳನ್ನು ‘ಅಂಜದಿರು ಮನವೆ” ಕವನದ ಮೂಲಕ ಸಾಂತ್ವನ ನೀಡಿದ್ದಾರೆ. “ಜಗದ ಟೀಕೆಗಳಿಗೆ ಅಂಜದಿರು ಆತ್ಮವಿಶ್ವಾಸವನ್ನು ಬಿಡದಿರು
ದುಷ್ಟ ಜನರ ಕುಹಕ ನುಡಿಗಳಲೆಕ್ಕಿಸದಿರು
ಸೋಲು ಸಂಕಟಗಳಿಗೆ ಮರುಗದಿರು”
ಎಂದು ನೊಂದ ಜೀವಕ್ಕೆ ಆತ್ಮವಿಶ್ವಾಸ ತುಂಬಿ ಕವಿ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ.”ಧರಣಿ ಪುತ್ರ” ಕವಿತೆಯಲ್ಲಿ ರೈತನ ಬದುಕಿನ ಚಿತ್ರಣ ಅನಾವರಣಗೊಂಡಿದೆ. “ಹಳ್ಳಿ ಎಂದರೆ ಸ್ವರ್ಗ” ಹಳ್ಳಿಯ ಸೊಬಗು,ರಾಗಿಯ ರಸವತ್ತತೆ,ಹಳ್ಳಿಯ ಚಂದದ ಮತ್ತು ಸ್ವಚ್ಛಂದ ಬದುಕಿನ ಚಿತ್ರಣ ಸೊಗಸಾಗಿ ಮೂಡಿ ಬಂದಿದೆ.”ಚುನಾವಣೆಯ ಮಹತ್ವ” ಕವಿತೆಯಲ್ಲಿ ಸಾಮಾಜಿಕ ಕಳಕಳಿ ಮತ್ತು ಮತದಾನದ ಮಹತ್ವವನ್ನು ಸಾರಿವೆ.”ಈ ನಾಡು ದೇವಾಲಯ, ಕನ್ನಡದ ಕಂಪು, ಭುವನೇಶ್ವರಿಗೆ ನಮನ” ಎಲ್ಲಾ ಕವಿತೆಗಳು ನಾಡು ನುಡಿಯ ಹಿರಿಮೆ ,ಕನ್ನಡದ ಇಂಪುಗಳ ಹಿರಿಮೆಯನ್ನು ಎತ್ತಿ ಹಿಡಿದಿವೆ. “ಹಸಿರು ಉಸಿರು” ಕವಿತೆಯಲ್ಲಿ ಪ್ರಕೃತಿಯ ಕಾಳಜಿ ಹಾಸು ಹೊಕ್ಕಾಗಿದೆ. ಲವ್ ಇಲ್ದೆ ಲೈಫು ಇಲ್ಲ, ಪ್ರೇಮ ಪಲ್ಲವಿ ಕವನಗಳು ದಾಂಪತ್ಯದಲ್ಲಿನ ಸಾಮರಸ್ಯದ ಪ್ರತೀಕವಾಗಿವೆ .
ಜೀವನದಲ್ಲಿ ಹತ್ತು ಹಲವಾರು ಏರು ಪೇರುಗಳನ್ನು ಕಂಡಿರುವ ಕವಿಗಳು ತಮ್ಮ ಪ್ರತಿಯೊಂದು ಕವನಗಳಲ್ಲಿ ತಮ್ಮ ಬಾಳಿನಲ್ಲಿ ಕಂಡುಂಡ ಅನುಭವಗಳನ್ನು ಮನಮೋಹಕವಾಗಿ ಮತ್ತು ಮಾರ್ಮಿಕವಾಗಿ ಸೆರೆಹಿಡಿಯುವಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಶಿವಶರಣ ಬರವಣಿಗೆ ಶೈಲಿ ಸರಳವಾದ ಪದಗಳಿಂದ ಕೂಡಿದ್ದರೂ ತುಂಬಾ ಮಹತ್ವವ ವಿಷಯಗಳ ಮೇಲೆ ಬೆಳಕು ಚೆಲ್ಲುವ ನೈಜ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದಾರೆ.ಪಾವಗಡ ತಾಲ್ಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಸಾಹಿತ್ಯದ ಮೂಲಕ ಕನ್ನಡಾಂಬೆಯ ಸೇವೆ ಮಾಡುವ ಪ್ರಾಮಾಣಿಕ ಪ್ರಯತ್ನ ವೀರಭದ್ರಪ್ಪನವರದ್ದು. ಇಂತಹ ಕವಿಗಳು ಬೆಳೆಯಬೇಕು, ನಾಡು ನುಡಿಯ ಕೀರ್ತಿ ಉಳಿಯಬೇಕು ನೂರಾರು ಸಮಸ್ಯೆಗಳ ಮಧ್ಯದಲ್ಲಿ ತಮ್ಮದೇ ಆದ ಆರ್ಥಿಕ ಮುಗ್ಗಟ್ಟು ಇದ್ದರೂ ಪುಸ್ತಕವನ್ನು ಪ್ರಕಟಿಸಿ ಓದುಗರಿಗೆ ಕವಿಗಳು ಅರ್ಪಿಸಿದ್ದಾರೆ .ಅವರ ಪ್ರಯತ್ನಕ್ಕೆ ನಾವು ಬರೆ ಚಪ್ಪಾಳೆ ತಟ್ಟಿದರೆ ಸಾಲದು, ಅವರ ಬರೆದ ಪುಸ್ತಕವನ್ನು ಕೊಂಡುಕೊಂಡು ಓದಿ ಅವರಿಗೆ, ಅವರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕವಿಗಳಿಂದ ಇನ್ನೂ ಉತ್ತಮವಾದ ಕೃತಿಗಳು ಪ್ರಕಟಣೆಗೊಳ್ಳಲಿ,ಕನ್ನಡಮ್ಮನ ಮಡಿಲಿನ ಬಾನಂಗಳದಲ್ಲಿ ಅವರ ಕೀರ್ತಿ ಹೆಚ್ಚಾಗಲಿ ಎಂದು ಹಾರೈಸಿವೆ.

ಜೈ ಕನ್ನಡ ಜೈ ಕರ್ನಾಟಕ ಭುವನೇಶ್ವರಿ

-ಪುಸ್ತಕ ಪರಿಚಯ ಬಲವಂತ.ಸಿ.ಮೋರಟಗಿ (ಬಸವಪ್ರಿಯ),ಕವಿ ಮತ್ತು ಕಥೆಗಾರರು
ವಿಜಯಪುರ ಜಿಲ್ಲೆ,ದೂರವಾಣಿ:9740123673

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ