ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಚುಟುಕು ಸಾಹಿತ್ಯ ಸಮ್ಮೇಳನ

ಬೆಂಗಳೂರು :ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು 16ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಹೆಚ್. ಎಸ್. ರೇಣುಕಾಪ್ರಸಾದ್ ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 15.09.2024ನೇ ಬಾನುವಾರ ಚಾಮರಾಜಪೇಟೆ ಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಇದರ ಕುವೆಂಪು ಸಭಾಂಗಣದಲ್ಲಿ ಜರುಗಲಿರುವುದು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀ ಬಿ. ಶಿವಲಿಂಗೇಗೌಡ, ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು (ವಿಶ್ರಾಂತ) ಇವರು ವಹಿಸುವರು.

ಅದೇ ದಿನ ಬೆಳಿಗ್ಗೆ 9.30 ಗಂಟೆಗೆ ಶ್ರೀಮತಿ ಗಿರಿಜಾ ಗಂಗಾವತಿಯವರಿಂದ ಜಾನಪದ ಗೀತೆಗಳ ಗಾಯನ ದೊಂದಿಗೆ ಬೆಳಿಗ್ಗೆ 10.00 ಗಂಟೆಗೆ ನಾಡೋಜ ಡಾ|| ವೂಡೆ ಪಿ ಕೃಷ್ಣ, ಗೌ॥ ಪ್ರದಾನ ಕಾರ್ಯದರ್ಶಿಗಳು, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಇವರು ಕಾರ್ಯಕ್ರಮ ಉದ್ಘಾಟಿಸುವರು.

ಸಮಾರಂಭದ ಅಧ್ಯಕ್ಷತೆಯನ್ನು ಡಾ।। ಎಂ.ಜಿ.ಆರ್. ಅರಸ್, ಮೈಸೂರು ಸಂಸ್ಥಾಪಕರು ಚುಟುಕು ಸಾಹಿತ್ಯ ಪರಿಷತ್ತು, ಕೇಂದ್ರ ಸಮಿತಿ ಇವರು ವಹಿಸಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ರತ್ನ ಹಾಲಪ್ಪಗೌಡ ಸಂಪಾದಕರು ಕೌಸ್ತುಭ ಮಾಸಪತ್ರಿಕೆ, ಮೈಸೂರು ಇವರು ವಹಿಸಿಕೊಳ್ಳುವರು.

ಗೌರವ ಉಪಸ್ಥಿತಿ :ಡಾ॥ ಎ. ಶ್ರೀಲತ ಲೇಖಕಿ, ಪ್ರಾಧ್ಯಾಪಕಿ, ನಾಗಾರ್ಜುನ ಪದವಿ ಕಾಲೇಜು, ಬೆಂಗಳೂರು, ಹಾಗೂ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಶ್ರೀ ರಾ. ವಿಜಯಸಮರ್ಥ ಅಧ್ಯಕ್ಷರು, ಬೆಂಗಳೂರು ನಗರಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇವರು ನಡೆಸಿಕೊಡುವರು.

ಬೆಳಿಗ್ಗೆ 12.00 ಗಂಟೆಗೆ “ಚುಟುಕು ಸಾಹಿತ್ಯಕ್ಕೆ ಸಾಹಿತಿಗಳ ಕೊಡುಗೆ” ವಿಷಯದ ಮೇಲೆ ವಿಚಾರ ಸಂಕೀರ್ಣದಲ್ಲಿ ವಿಚಾರ ಮಂಡನೆ ಯನ್ನು ಡಾ|॥ ಲಲಿತ ಹೊಸಪ್ಯಾಟಿ, ಸಾಹಿತಿಗಳು ಇವರು ನಡೆಸುವರು.
ಚುಟುಕು ಸಾಹಿತ್ಯ ನಡೆದು ಬಂದ ದಾರಿ ಕುರಿತು ವಿಚಾರ ಮಂಡನೆ ಯನ್ನು ಶ್ರೀಮತಿ ಸುಮ ಸತೀಶ್, ಸಾಹಿತಿಗಳು ಇವರು ನಡೆಸಿಕೊಡುವರು.

ಚುಟುಕು ಸಾಹಿತ್ಯದ ಮಹತ್ವ ಕುರಿತು ವಿಚಾರ ಮಂಡನೆ ಯನ್ನು ಡಾ॥ ರಾಜಶ್ರೀ ಕಿಶೋರ್, ಸಂಶೋಧಕರು ಅಧ್ಯಕ್ಷರು ಸಿರಿಗನ್ನಡಂಗೆ ಪ್ರತಿಷ್ಠಾನ ಹಾಗೂ ಶ್ರೀ ಹೆಚ್.ಎಸ್. ರೇಣುಕಾ ಪ್ರಸಾದ್ ಪ್ರಶಸ್ತಿ ಪುರಸ್ಕೃತರು ಹಣಬೆ ನ ಪಾಪೇಗೌಡ, ಚುಟುಕು ಸಾಹಿತಿಗಳು,ದೊಡ್ಡಬಳ್ಳಾಪುರ ಇವರು ನೆರವೇರಿಸುವರು.

ಉಪಹಾರ ಬೆಳಿಗ್ಗೆ 9.00 ಗಂಟೆಗೆ ಹಾಗೂ ಊಟದ ಬಿಡುವು ಮಧ್ಯಾಹ್ನ 1.00 ರಿಂದ 2.00 ಗಂಟೆಗೆ ಇರುವುದಲ್ಲದೆ ಮಾಹಿತಿ ಸಹಕಾರವನ್ನು ಶ್ರೀ ಬಿ. ಶೃಂಗೇಶ್ವರ, ಸಾಹಿತಿಗಳು ಮತ್ತು ಸಂಘಟಕರು ಹಾಗೂ ವೇದಿಕೆ ನಿರ್ವಹಣೆಯನ್ನು ಶ್ರೀಮತಿ ನಾಗರತ್ನ ವೆಂಕಟೇಶ್ ಮತ್ತು ಶ್ರೀಮತಿ ಭಾರತಿ ಎಂ. ಪ್ರಕಾಶ್ ಇವರು ನಡೆಸಿ ಕೊಡುವರು.

ಚುಟುಕು ಕವಿಗೋಷ್ಠಿ ಮಧ್ಯಾಹ್ನ 2.00 ಗಂಟೆಗೆ ಡಾ|| ಗೀತಾಚಾರ್ಯ, ಹಿರಿಯ ಸಾಹಿತಿಗಳು ಇವರ ಅಧ್ಯಕ್ಷರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ನಾಡೋಜ ಡಾ॥ ಷಡಕ್ಷರಿ, ಅಧ್ಯಕ್ಷರು ರಮಣಶ್ರೀ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಮಂಜುನಾಥ್ ದಡ್ಡಿಮನಿ, ಆರಕ್ಷಕ ಉಪನಿರಿಕ್ಷಕರು, ಕೆಂಗೇರಿ ಇವರು ಉಪಸ್ಥಿತರಿರುವರು.

ಸಮಾರೋಪ ಭಾಷಣ ವನ್ನು ಡಾ|| ವಿಜಯ ಸುಬ್ಬರಾಜ್ ಪ್ರಾಧ್ಯಾಪಕರು ಮತ್ತು ಸಾಹಿತಿಗಳು ಇವರು ನಡೆಸಿಕೊಡುವವರಿದ್ದು ಶ್ರೀಯುತರಾದ ಬಸವಲಿಂಗ ಎಲ್,ಗೀತಾ ಕೈಲ್ಕೆರೆ, ಆಶಾ ಬದ್ರಿನಾಥ್, ಸಿರಾಜ್ ಅಹಮದ್ ಸೊರಬ್. ಶ್ವೇತಾ ನಿಹಾಲ್ ಜೈನ್, ಮಧುಮತಿ ಎಸ್‌.ಕುಲಕರ್ಣಿ, ಪದ್ಮಾವತಿ ಚಂದ್ರು, ವರ್ತೂರು ತ್ಯಾಗರಾಜ್, ಆದಿನಾರಾಯಣ ಪ್ರಸಾದ್, ಶಾಂತಮೂರ್ತಿ, ಡಾ|| ಹರೀಶ್, ವೀರಭದ್ರೇಗೌಡ, ಎಲ್ ಪಿ ಕುಮಾರ್, ಶ್ರೀನಿವಾಸ ಕುಂಡಂತಾಯ, ಪತ್ತಂಗಿ ಎಸ್. ಮುರಳಿ, ರತ್ನಾ ನಾಗರಾಜ್. ಅಮರೇಶ ವಲ್ಕಂದಿನ್ನಿ, ಸೋಮಶೇಖರ ಎಚ್.ಜಿ. ಕೆ.ಎಲ್. ವಿಶ್ವನಾಥ, ಚಂದ್ರಶೇಖರ ವಿ, ಜಯಂತಿ ಕೆ.ಎಸ್, ಮಾನಸಾ ಕೆ.ಕೆ, ಗೀತಾ ರಂಗನಾಥ್, ಶಾಂತಿ ವಾಸು, ಡಾ.ರವೀಂದ್ರ ಆರ್ ಎಸ್, ಡಾ.ಚಿ.ದೇ.ಸೌಮ್ಯಾ ಮುಂತಾದ ಚುಟುಕು ಕವಿಗಳು ಭಾಗವಹಿಸುತ್ತಿದ್ದು ಶ್ರೀಯುತರಾದ ಚಂದ್ರಶೇಖರ ಮುದಬಾವಿ, ಸದಾಶಿವಯ್ಯ ಜರಗನಹಳ್ಳಿ, ನಾಗಭೂಷಣ ಭಟ್ ಬಾಳಾಪುರ, ಡಿ.ಎ.ಲಕ್ಷ್ಮಿನಾಥ, ರಾಂ.ಕೆ.ಹನುಮಂತಯ್ಯ, ಡಾ.ರಾಮಲಿಂಗೇಶ್ವರ(ಸಿಸಿರಾ), ಅಂಬುಜಾಕ್ಷಿ ಬೀರೇಶ್, ಎಂ.ಶಿವಸ್ವಾಮಿ, ವಿ.ಎಸ್.ಸತ್ಯನಾರಾಯಣ ರಾವ್, ದೇಸು ಆಲೂರ್, ಪಾರ್ವತಿ ಕಾರಂತ್, ತ್ರಿದೇವಿ ಓಂಕಾರೋ, ಕುವರ ಯಲ್ಲಪ್ಪ, ಬಿ.ಶೃಂಗೇಶ್ವರ, ವಿ.ಹೇಮಂತಕುಮಾರ್, ಧೀರೇಂದ್ರ ನಾಗರಹಳ್ಳಿ, ಪೂರ್ಣ ಚಂದ್ರ, ಕೆ.ಎಂ. ರೇವಣ್ಣ, ಆರೋ ವಾದಿರಾಜೋ, ಗೌರಮ್ಮ, ಶ್ರೀ ವಿ. ರೇಣುಕಾ ಪ್ರಸನ್ನ, ಬಿ.ನಾಗೇಶ್ ಇವರುಗಳನ್ನು ಇದೇ ಸಂಧರ್ಭದಲ್ಲಿ ಅಭಿನಂದಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವರದಿ :ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ