ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆ ಸೋಮವಾರವಾಗಿದ್ದರಿಂದ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ ಹಾಗೂ ಸೋಮವಾರ ನಸಕಿನ ಜಾವ 4ಘಂಟೆಯಿಂದ ಮೂಲನಂದೀಶ್ವರನಿಗೆ ರುದ್ರಾಭಿಷೇಕ ,ಅಭಿಷೇಕ ಮತ್ತು ಹೂ ಕಾಯಿ ಕರ್ಪೂರದಿಂದ ವಿಶೇಷ ಪೂಜೆಯೊಂದಿಗೆ ದೀಡ್ ನಮಸ್ಕಾರ ಮಕ್ಕಳಿಗೆ ಜವಳ ತೆಗೆಯುವ ಕಾರ್ಯಕ್ರಮ ಸೇರಿದಂತೆ ವಿವಿಧ ಹರಕೆಗಳನ್ನು ಭಕ್ತರು ತೀರಿಸಿದರು. ಈ ಸಂಧರ್ಭದಲ್ಲಿ ದೂರದ ಊರುಗಳಿಂದ ಭಕ್ತರು ಸೋಮವಾರ ಮುನ್ನಾ ದಿನ ಪಟ್ಟಣಕ್ಕೆ ಆಗಮಿಸಿ ವಸತಿ ಗೃಹಗಳಲ್ಲಿ ವಸತಿ ಮಾಡಿ ಸೋಮವಾರ ದೇವರಿಗೆ ಅಭಿಷೇಕ ಹೂವು ಹಣ್ಣು ಕಾಯಿ ಕರ್ಪೂರವನ್ನು ಅರ್ಪಿಸಿ ದೇವರ ದರ್ಶನವನ್ನು ಪಡೆದುಕೊಂಡು ಪುನೀತರಾದರು.
ವರದಿ- ಪರಶುರಾಮ ಈಳಗೇರ