ಚಿತ್ತಾಪುರ; ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಕಾನೂನು ಚೌಕಟ್ಟಿನೊಳಗೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಕೋಮು ಸೌಹಾರ್ದತೆ ಹಾಗೂ ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಏಕತೆ, ಸಮಾಜದಲ್ಲಿ , ಶಾಂತಿ, ಸುವ್ಯವಸ್ಥೆ ಇದ್ದರೆ ಪ್ರತಿ ಕುಟುಂಬ ಶಾಂತಿಯಿಂದ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.
ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬ ಒಟ್ಟಿಗೆ ಬಂದಿರುವುದರಿಂದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಹಬ್ಬ ಆಚರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಳ್ಳಲಿದೆ. ಹೀಗಾಗಿ ಅಹಿತಕರ ಘಟನೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಸೂಚನೆ ನೀಡಿದರು.
ಪಟ್ಟಣದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅಂತಹ ಘಟನೆಗಳಿಗೆ ಆಸ್ಪದ ಮಾಡಿಕೊಡಬಾರದು. ತಾಲೂಕಿಗೆ ಯಾವುದೇ ಕಪ್ಪು ಚುಕ್ಕೆ ತರದಂತೆ ನಡೆದುಕೊಳ್ಳಬೇಕು ಎಂದರು.
ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ ಮಾತನಾಡಿ, ಪಟ್ಟಣದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಸರ್ಕಾರದ ಆದೇಶ ಪಾಲಿಸೋಣ ಹಾಗೂ ಪಟ್ಟಣದಲ್ಲಿ ವಿದ್ಯತ್ ಸಮಸ್ಯೆ ಬಹಳ ಇದೆ ಎಂದು ಜೆಸ್ಕಾಂ ಇಲಾಖೆಯವರ ಗಮನಕ್ಕೆ ತಂದರು.ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ,ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ,ಮಾಹಿತಿ ಕೇಳಲು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಪೋನ್ ಕಾಲ್ ಮಾಡಿದರೆ ಅವರು ಪೋನ್ ರೀಸಿವ್ ಮಾಡುವುದಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತುರಕರ್, ಸಿಪಿಐ ಚಂದ್ರಶೇಖರ ತಿಗಡಿ, ಪುರಸಭೆ ಇಲಾಖೆ ಅಧಿಕಾರಿ ಲೋಹಿತ್ ಕಟ್ಟಿಮನಿ, ಜೆಸ್ಕಾಂ ಇಲಾಖೆ ಅಧಿಕಾರಿ ಮಡಿವಾಳಪ್ಪ, ಪುರಸಭೆ ಸದಸ್ಯ ಜಗದೀಶ ಚವ್ಹಾಣ, ವಿಠ್ಠಲ್ ಕಟ್ಟಿಮನಿ, ಕೋಟೇಶ್ವರ ರೇಶ್ಮಿ ಮಾತನಾಡಿದರು.
ಪುರಸಭೆ ಸದಸ್ಯರಾದ ವಿನೋದ್ ಗುತ್ತೇದಾರ, ಶ್ರೀನಿವಾಸ ಪಾಲಪ್ ಮುಖಂಡರಾದ ಎಂ.ಎ ರಶೀದ್, ಇಕ್ಬಾಲ್ ಸೇಠ್, ಆನಂದ ಗೌಡ ನರಿಬೋಳ, ಹಣಮಂತ ಸಂಕನೂರ್, ನಾಗರೆಡ್ಡಿ ಗೋಪಸೇನ್, ವಿಜಯಕುಮಾರ್ ಚವ್ಹಾಣ, ಶಿವಾಜಿ ಕಾಶಿ, ಸಂಜಯ ಬುಳಕರ್, ಲಕ್ಷ್ಮೀಕಾಂತ ಸಾಲಿ, ಸಂತೋಷ ಪೂಜಾರಿ, ಸಂತೋಷ ಕಲಾಲ್ ಸೇರಿದಂತೆ ಇತರರು ಇದ್ದರು.
ಪಿಎಸ್’ಐ ಶ್ರೀಶೈಲ್ ಅಂಬಾಟಿ ಸ್ವಾಗತಿಸಿದರು. ಎಎಸ್’ಐ ಬಾಬುರಾವ ಇಂಚಗೇರಿ ನಿರೂಪಿಸಿ, ವಂದಿಸಿದರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ