ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪೋಲಿಸ್ ಠಾಣೆ ಅವರಣದಲ್ಲಿ ದಿನಾಂಕ 25 – 8 -2024 ರಂದು
ಈದ್ ಮೀಲಾದ್ ಹಾಗೂ ಗೌರಿಗಣೇಶ ಹಬ್ಬದ ಪ್ರಯುಕ್ತ ಕೊಟ್ಟೂರು ಪೋಲಿಸ್ ಠಾಣಾ ವ್ಯಾಪ್ತಿಗೆ ಸೇರಿದ ಕೊಟ್ಟೂರು ತಾಲೂಕಿನ ಗ್ರಾಮಗಳ ಮುಖ್ಯಸ್ಥರುಗಳೊಂದಿಗೆ ಮಲ್ಲೇಶಪ್ಪ ಮಲ್ಲಾಪುರ ಡಿ ವೈ ಎಸ್ ಪಿ ಕೂಡ್ಲಿಗಿ ಅಧ್ಯಕ್ಷರು ಮತ್ತು ಸಿ ಪಿ ಐ ವೆಂಕಟಸ್ವಾಮಿ, ಪಿ ಎಸ್ ಐ ಗೀತಾಂಜಿಲಿ ಶಿಂಧೆ ರವರ ನೇತೃತ್ವದಲ್ಲಿ ಶಾಂತಿಸಭೆ ನಡೆಸಲಾಯಿತು .ಹಿಂದೆ ನಡೆದ ಶಾಂತಿ ಸಭೆಯಲ್ಲಿ ಡಿ ವೈ ಎಸ್ ಪಿ ಮಲ್ಲೇಶ್ ಮಲ್ಲಾಪುರ,ಸಿ ಪಿ ಐ ವೆಂಕಟಸ್ವಾಮಿ ಎಸ್, ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ಸಾರ್ವಜನಿಕರಿಗೆ ಗಣೇಶ ಮೂರ್ತಿ ಪ್ರತಿಷ್ಟಾಪಿಸುವಾಗ ಪೋಲಿಸ್ ಠಾಣೆಯ ಅನುಮತಿ ಪಡೆದುಕೊಳ್ಳಬೇಕು ಸೌಂಡ್ ಸಿಸ್ಟಂ ಧ್ವನಿವರ್ಧಕ ಬಳಕೆಗೆ ಪೋಲಿಸ್ ಇಲಾಖೆಯಿಂದ ಮತ್ತು ವಿದ್ಯುತ್ ದೀಪ ಬಳಿಸಲು ಕಡ್ಡಾಯವಾಗಿ ಜೆಸ್ಕಾನಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಹಿಂದೆ ನಡೆದ ಶಾಂತಿ ಸಭೆಯಲ್ಲಿ ತಿಳಿಸಿದ್ದರು.
ಸಾರ್ವಜನಿಕರು ಗಣೇಶ ಹಬ್ಬದ ಪ್ರಯುಕ್ತ
ಪಟ್ಟಣದಲ್ಲಿ ,ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪಿಸಲು ಸಂಭಂದ ಪಟ್ಟ ಇಲಾಖೆ ಅಧಿಕಾರಿಗಳಿಂದ ಸಾರ್ವಜನಿಕರು ಕಡ್ಡಾಯವಾಗಿ ಅನುಮತಿ ಪತ್ರ ಪಡೆದುಕೊಳ್ಳಲು ಪೋಲಿಸ್ ಠಾಣಾ ಅವರಣಕ್ಕೆ ದಿನಾಂಕ 2-9-2024 ರಂದು ಅಗಮಿಸಿ ಪೋಲಿಸ್, ಜೆಸ್ಕಾಂ,ಅಗ್ನಿಶಾಮಕ ದಳ,ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಸಾರ್ವಜನಿಕರು ಅನುಮತಿ ಪತ್ರ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಯಾದ ಎರ್ರಿಸ್ವಾಮಿ,ರೇವಣಸಿಧ್ದಪ್ಪ,ಅಗ್ನಿಶಾಮಕ ದಳ ಸಿಬ್ಬಂದಿ ಮೋಹನ್ ಜಿ ಪಿ ,ಪಟ್ಟಣ ಪಂಚಾಯಿತಿ ಸಿಬ್ಬಂದಿಯಾದ ಶಿವಾನಿ,ಜೆಸ್ಕಾಂ ಸಿಬ್ಬಂದಿಯಾದ ಎಚ್ ಎಮ್ ಕೊಟ್ರಯ್ಯ ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.