ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ನಮ್ಮ ಊರು, ನಮ್ಮ ಪೊಲೀಸ್ , ನಮ್ಮ ಬೀಟ್ ಎನ್ನುವ ಪೋಸ್ಟರ್ ಗಳನ್ನು ಜನನಿಬಿಡವಾದ ಸ್ಥಳಗಳಲ್ಲಿ ಅಂಟಿಸಿ ಸಣ್ಣಪುಟ್ಟ ಅಹಿತಕರವಾದ ಘಟನೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ಹಾಗೂ ನಗರದ ಪೊಲೀಸ್ ಠಾಣಾ ಪೊಲೀಸರು ಸಾರ್ವಜನಿಕರಿಗೆ ಜಾಗರೂಕತೆಯನ್ನು ಮೂಡಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆಯ ಪೊಲೀಸರು ನಗರದ ಬಸ್ ನಿಲ್ದಾಣದ ಬಸ್ ಕಂಟ್ರೋಲರ್ ಆಫೀಸ್ ಮುಂಬಾಗ ಪೋಸ್ಟರ್ ಗಳನ್ನು ಅಂಟಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು.
ಸುಧಾರಿತ ಬೀಟ್ ವ್ಯವಸ್ಥೆಯಲ್ಲಿ ಪ್ರತಿಯೊಂದು ಬೀಟ್ ಗಳನ್ನು ಹಂಚಿಕೆ ಮಾಡಿ, ಅದರೊಳಗೆ ಪೊಲೀಸರನ್ನು ಹಂಚಿಕೆ ಮಾಡಿ , ಪೊಲೀಸರಿಗೆ ಸರ್ಕಾರಿ ಸಂಚಾರಿ ನಂಬರ್ ಗಳನ್ನು ಹಂಚಿಕೆ ಮಾಡಿರುತ್ತಾರೆ ಈ ಬೀಟ್ ಸಂಬಂಧ ಪಟ್ಟಂತೆ ಏನೇ ಅಹಿತಕರ ಘಟನೆಗಳ ಸಂಬಂಧಿಸಿದಂತೆ ಗೋಡೆಗಳ ಮೇಲೆ ಅಂಟಿಸಿರುವ ಪೋಸ್ಟರ್ ಗಳಲ್ಲಿ ನಮ್ಮ ಪೊಲೀಸ್, ನಮ್ಮ ಬೀಟ್ ಅನ್ನುವಂತ ಸರ್ಕಾರಿ ನಂಬರುಗಳು ಇರುತ್ತವೆ. ಈ ನಂಬರ್ ಗಳಿಗೆ ನೀವು ಕರೆ ಮಾಡಿದರೆ ತಕ್ಷಣ ನಾವುಗಳು ಸ್ಪಂದನೆ ಮಾಡುತ್ತೇವೆ ಎಂದು ಬೀಟ್ ಪೊಲೀಸ್ ಗಳಾದ ದೇವೇಂದ್ರ ಹಾಗೂ ಅಜ್ಜನಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಸ್ ಕಂಟ್ರೋಲರ್ ಆಫೀಸ್ ಅಧಿಕಾರಿ , ಮಲ್ಲಪ್ಪ ದಿವಾನ್ದಾರ್, ಶಿವನಗೌಡ ಪಾಟೀಲ್ , ಪ್ರಶಾಂತ್ ಪುಕಾಳೆ, ಖೈಯುಮ್ ನಾಯಕವಾಡಿ , ಮುಬಾರಕ್ ಸಪ್ತಸಾಗರ್ ಇನ್ನೂ ಅನೇಕರಿದ್ದರು.
ವರದಿ:ಮಹಿಬೂಬ್ ಎಂ ಬಾರಿಗಡ್ಡಿ