ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ತುಂಬರಗಧ್ದಿ ಚಾರಿಟಬಲ್ ಟ್ರಸ್ಟ್ (ರಿ.)ಸಂಸ್ಥಾಪಕರಾದ ಶ್ರೀ ಟಿ,ಸತೀಶ್ ನಿವೃತ್ತಿ ಸಹ ಪ್ರಾಧ್ಯಾಪಕರು ರವರು ಟ್ರಸ್ಟ್ ವತಿಯಿಂದ ಸುಮಾರು ವರ್ಷದಿಂದ ಕೊಟ್ಟೂರು ತಾಲೂಕಿನ ಸರ್ಕಾರಿ ಶಾಲೆ ವಿಧ್ಯಾರ್ಥಿಗಳಿಗೆ ಉಚಿತವಾಗಿ ಪೆನ್, ಪೆನ್ಸಿಲ್,ನೋಟ್ ಬುಕ್,ವಿತರಣೆ ಸೇವೆ ಮಾಡುತ್ತಾ ಬಂದಿದ್ದು ಪ್ರತಿ ವರ್ಷದಂತೆ ಈ ವರ್ಷ ಕೂಡಾ ಕೊಟ್ಟೂರು ತಾಲೂಕಿನ ಜಾಗಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ತುಂಬರಗುದ್ದಿ ಚಾರಿಟೇಬಲ್(ರಿ.)ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಶ್ರೀ ಟಿ.ಸತೀಶ್ ನಿವೃತ್ತಿ ಸಹ ಪ್ರಾಧ್ಯಾಪಕರು 84 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ,ಪೆನ್,ಪೆನ್ಸಿಲ್, ಬಿಸ್ಕತ್ತು ಪ್ಯಾಕ್,ವಿಧ್ಯಾರ್ಥಿಗಳಿಗೆ ನೀಡಿದರು ನಂತರ ಅವರು ಮಾತನಾಡಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಟ್ಟು ವಿದ್ಯಾವಂತರಾಗಬೇಕು ಒಳ್ಳೆ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಹುಧ್ದೆಯನ್ನು ಪಡೆದು ತಮ್ಮ ಜೀವನದ ಅಗತೈತೆಗಳನ್ನು ಪೂರೈಸಿಕೊಂಡು ನಿಮ್ಮ ಕೈಲಾದಷ್ಟು ಉಳಿದ ಹಣದಲ್ಲಿ ಸಮಾಜದಲ್ಲಿ ದಾನ ಧರ್ಮ ಮಾಡಿರಿ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಲಲಿತಮ್ಮ, ಸಿ ಅರ್ ಪಿ ಕೊಟ್ರೇಶಿ ಕೆ, ಸಹ ಶಿಕ್ಷಕರಾದ ಹಮೀದ್ ಸಾಹೇಬ್ ,ಶ್ರೀಮತಿ ಲೀಲಾವತಿ ,ಅತಿಥಿ ಶಿಕ್ಷಕರಾದ ಉಮೇಶಿ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.
