ಕಲಬುರಗಿ:ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗುಂಡೂರು ಗ್ರಾಮದ ನಿವಾಸಿಯಾದ ಕುಮಾರಿ ಭಾಗ್ಯ ತಂದೆ ಪಂಡಿತ್ ಮೇಲೆ ಅತ್ಯಾಚಾರವೆಸಗಿ,ಕೊಲೆ ಮಾಡಿದವರ ಮೇಲೆ ಕ್ರಮ ಕೈಗೊಂಡು ಹಾಗೂ ಗಲ್ಲು ಶಿಕ್ಷೆಯಾಗಬೇಕೆಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ವಿಧ್ಯಾರ್ಥಿ ಯುವ ಮೋರ್ಚಾದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರವಿಕಿರಣ ಮೈಲಾರˌ ಉಪಾಧ್ಯಕ್ಷ ಅನುದೀಪ ದಂಡೋತಿ,ಸಂಚಾಲಕ ಬಂಡಯ್ಯ ಸಿ ಮಠಪತಿˌಕಾರ್ಯದರ್ಶಿ ಅರುಣಕುಮಾರ,ಸಂಘಟನಾ ಕಾರ್ಯದರ್ಶಿಗಳಾದ ಅಭಿಷೇಕ ˌ ಶಿವಶರಣಪ್ಪ ಪೋಲೀಸ ಪಾಟೀಲ,ನಿತೇಶ ಏ ಲಗಶೆಟ್ಟಿ ಹಾಗೂ ಯುವ ಮುಖಂಡ ಸಾಯಿಕುಮಾರ ಇದ್ದರು.
