ಜೇವರ್ಗಿ: ಕಲಬುರ್ಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು
ನಾನು ಎಂದರೆ ಮಹಮ್ಮದ ಶೋಹೇಬ ಗಿರಣಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತನಾಗಿ ಸಂಘಟನೆಯಲ್ಲಿ ಸುಮಾರು 6 ವರ್ಷಗಳ ಕಾಲ ನಿರಂತರವಾಗಿ ಚಳುವಳಿ ಹಾಗೂ ಹೋರಾಟದ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡು ಸಂಘಟನೆಯಗೆ ಬೆನ್ನೆಲುಬಾಗಿ ಕೆಲಸ ಮಾಡಿದ್ದೇನೆ.
ಪ್ರಸ್ತುತ ಸದರಿ ರಾಜೀನಾಮೆ ಪತ್ರವನ್ನು ಬಸುಗೌಡ ರಾಜ್ಯ ಕಾರ್ಯದರ್ಶಿಗಳು ಗಂವ್ಹಾರ ಇವರ ಮೂಲಕ ಮಾನ್ಯ ಕೊಡಿಹಳ್ಳಿ ಚಂದ್ರಶೇಖರ ರಾಜ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರ್ನಾಟಕ ರಾಜ್ಯ ಮಂಡಳಿ ಬೆಂಗಳೂರು ರವರಿಗೆ ಗಮನಕ್ಕೆ ತರಬಯಸುವುದೇನೆಂದರೆ ನಾನು ಸಾರ್ವಜನೀಕ ಕೆಲಸಕ್ಕಾಗಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಯಲ್ಲಿ ಪತ್ರ ವ್ಯವಹಾರ ಹಾಗೂ ಸಂಪರ್ಕವನ್ನು ಮಾಡಿದಾಗ ನಮ್ಮ ಸಂಘಟನೆಯ ಕೆಲವು ಪದಾಧಿಕಾರಿಗಳು ನನ್ನ ಪರವಾಗಿ ನಿಲ್ಲದೇ ನನಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲಾ ಮತ್ತು ನನ್ನ ಎಲ್ಲಾ ಕೆಲಸಗಳಿಗೆ ಅಡತಡೆ ಮಾಡುತ್ತಾ ಸದಾ ನನಗೆ ನನ್ನ ಸಂಘಟನೆ ಕೆಲಸ ಮಾಡಲು ಬಿಡಲಿಲ್ಲ ಹಾಗೂ ನನ್ನ ಎಲ್ಲಾ ಕೆಲಸಗಳ ಮಧ್ಯದಲ್ಲಿ ಬಿಡುಮಾಡಿಕೊಂಡು ಅಭಿವೃದ್ಧಿ ಕೆಲಸಗಳಿಗೆ ಮನಸು ಮಾಡಿ ಹೊರಾಟ ರೂಪಿಸಲು ಮುಂದೆ ಬಂದರೆ ನನಗೆ ಅಡ್ಡಿ ಪಡಿಸಿ ಅಧಿಕಾರಿಗಳ ಜೊತೆಯಲ್ಲಿ ಶಾಮೀಲಾಗಿ ನನಗೆ ಅಡ್ಡಿ ಪಡಿಸಿಸುವ ಮೂಲಕ ಸಂಘಟನೆ ಹೊರಾಟಕ್ಕೆ ಹಿನ್ನಡೆ ಪಡಿಸುತ್ತಿದ್ದು ನನಗೆ ತುಂಬಾ ಬೇಜಾರಾಗಿ ನನ್ನ ವಿಚಾರ ಹಾಗೂ ಸಂಘಟನಾತ್ಮಕ ಚಿಂತನೆಗೆ ಹಿನ್ನಡೆ ಸಹಿಸಲಾಗದೆ ಮನನೊಂದು ಸದರಿ ಸ್ನಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕೆಲವೊಮ್ಮೆ ನನ್ನ ವೈಯುಕ್ತಿಕ ಕೌಟುಂಬಿಕ ವಿಚಾರ ಹಾಗೂ ಧಾರ್ಮಿಕ
ವಿಚಾರಗಳ ಕುರಿತು ವಿಚಾರ ವ್ಯಕ್ತಪಡಿಸಲು ಅವಕಾಶ ನೀಡಲಾಗುತ್ತಿಲ್ಲಾ ಹಾಗೂ ಯಾವುದಾದರೂ ಸಂಘಟನಾತ್ಮಕ ವಿಚಾರಗಳಿಗೆ ಬೆಂಬಲ ಹಾಗೂ ಸ್ವತಂತ್ರ ಹೋರಾಟಅವಕಾಶ ಮಾಡಿಕೊಡುತ್ತಿಲ್ಲಾ ಕಾರಣ ನನಗೆ ಸಂಘನೆಯಲ್ಲಿ ಮುಂದುವರಿಯಲು ನನ್ನ ಮನಸು ಒಪ್ಪದ ಕಾರಣ ನಾನು ಬೆಸರದಿಂದ ಈ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಿದ್ದೇನೆ.
ವರದಿ: ಚಂದ್ರಶೇಖರ ಪಾಟೀಲ್(ಜೇವರ್ಗಿ)