ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ತಿರುಮಣಿಯಲ್ಲಿರುವ ವಿಶ್ವದ 3ನೇ ಅತಿ ದೊಡ್ಡ ಸೋಲಾರ್ ಪಾರ್ಕ್ ವೀಕ್ಷಣೆಗೆ ಬುಧವಾರ ಭೇಟಿ ಕೊಟ್ಟು ಸೋಲಾರ್ ಪಾರ್ಕ್ ವೀಕ್ಷಿಸಿದ ನಂತರ ಕ್ರೆಡಲ್ ಅಧ್ಯಕ್ಷರೂ ಆಗಿರುವ ಶಾಸಕರಾದ ಟಿ.ಡಿ. ರಾಜೇಗೌಡ ಅವರನ್ನು ಒಳಗೊಂಡಂತೆ ಶಾಸಕರಾದ ಯು.ಬಿ.ಬಣಕಾರ್, ಡಿ.ಜಿ.ಶಾಂತನಗೌಡ, ಹೆಚ್.ವಿ.ವೆಂಕಟೇಶ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ, ಭಾರತಿ ಶೆಟ್ಟಿ ಅವರಿದ್ದ ನಿಯೋಗಕ್ಕೆ ಅಧಿಕಾರಿಗಳು ಸೋಲಾರ್ ಪಾರ್ಕ್‌ನ ವೈಶಿಷ್ಟ್ಯತೆಗಳ ಬಗ್ಗೆ ವಿವರ ನೀಡಿದರು.
ರಾಜ್ಯ ಸರ್ಕಾರದ ಶಾಸಕರುಗಳಾದ ಡಿ.ಜಿ.ಶಾಂತನಗೌಡ,ಯುಬಿ ಬಣಕಾರ್,ಟಿಜಿ ರಾಜೇಗೌಡ,ತನ್ವಿರ್ ಸೇಠ್,ರಮೇಶ್ ಬಂಡಿ ಸಿದ್ದೇಗೌಡ,ಉಮಾಶ್ರೀ,ಭಾರತಿ ಶೆಟ್ಟಿ ವೇಳೆ ಸ್ಥಳೀಯ ಶಾಸಕ ಹೆಚ್ ವಿ ವೆಂಕಟೇಶ್ ಸ್ವಾಗತಿಸಿ ಪಟ್ಟಣದ ಶನಿಮಹಾತ್ಮ ದೇವಾಲಯಕ್ಕೆ ಆಹ್ವಾನಿಸಿ ಶನಿಮಹಾತ್ಮ ಮತ್ತು ಶೀತಲಾ0ಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಸೋಲಾರ್ ಪಾರ್ಕ್ ಎಂ ಡಿ ಗೌರವ ಗುಪ್ತಾ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು ,ಪುರಸಭಾ ಅಧ್ಯಕ್ಷ ರಾಜೇಶ್ , ವೆಂಕಟಮ್ಮನಹಳ್ಳಿ ನಾನಿ , ರವಿ, ವೆಂಕಟರಮಣಪ್ಪ , ವಿಶ್ವನಾಥ್ ಹಾಗೂ ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ವರದರಾಜು ಸೋಲಾರ್ ಪಾರ್ಕ್ ನ ಸಿಬ್ಬಂದಿ ಸೇರಿದಂತೆ ಮುಂತಾದವರಿದ್ದರು.
ವರದಿ ಪಾವಗಡ.ಕೆ. ಮಾರುತಿ ಮುರಳಿ