ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜ್ಞಾನ ಭಂಡಾರದ ಗಣಿ ಗುರುಗಳು

ಸರ್ವ ಗುರು ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಅಕ್ಷರ ಕಲಿಸಿ ವಿದ್ಯಾರ್ಥಿಯ ಬದುಕು ತಿದ್ದಿರುವರು
ಸನ್ಮಾರ್ಗ ತೋರಿಸಿ ಸ್ವರ್ಗ ಕರುಣಿಸಿರುವರು
ಜ್ಞಾನದ ತುತ್ತು ಉಣಿಸಿ ಅಜ್ಞಾನ ತೊಲಗಿಸಿರುವರು
ಕೈ ಹಿಡಿದು ನಡೆಸಿ ಮನದ ಭಯ ಓಡಿಸಿದವರು ಶಿಕ್ಷಕರು
ತಾಯಿಯ ಉಸಿರಿಗೆ ತಂದೆಯ ಹೆಸರಿಗೆ ಅರ್ಥ ಕೊಟ್ಟವರು

ಸುಳ್ಳನು ಬದಿಗೊತ್ತಿ ಸತ್ಯದ ಬೆಲೆ ತಿಳಿಸಿಕೊಟ್ಟರು
ನಮಗಿರುವ ಪರೀಕ್ಷಾ ಭಯ ನಿವಾರಿಸಿದರು
ಕಪ್ಪು ಹಲಗೆಯಲಿ ಬದುಕಿನ ಚಿತ್ರ ತೋರಿಸಿದರು
ಲೆಕ್ಕವ ತಿಳಿಸಿ ಲೆಕ್ಕಕ್ಕೆ ಸಿಗದ ಮಟ್ಟಕ್ಕೆ ಬೆಳೆಸಿದರು
ಎರಡನೇ ತಾಯಿಯ ಸ್ವರೂಪ ಗುರು ಪೂಜ್ಯರು

ದೇಶ ಸುತ್ತಿ ಕೋಶ ಓದಿ ಬುದ್ದಿಯ ಹೇಳಿದರು
ವ್ಯಾಯಾಮ ಮಾಡಿಸಿ ದೇಹವನ್ನ ಸದೃಢಗೊಳಿಸಿದರು
ಪ್ರಾರ್ಥನೆ ಮಾಡಿಸಿ ಮನಸಿನ ಮಲೀನತೆ ಶುಭ್ರಗೊಳಿಸಿದರು
ತಪ್ಪಾದಾಗ ದಂಡಿಸಿ ಯಾರ ಬಳಿ ಕೈ ಚಾಚಾದಂತೆ ತಿದ್ದಿದರು
ಪ್ರತಿ ವಿದ್ಯಾರ್ಥಿಯ ಭವಿಷ್ಯ ಬರೆದ ಮಹಾತ್ಮರು

ಒಮ್ಮೊಮ್ಮೆ ತಂದೆಯಾಗಿ ಜವಾಬ್ದಾರಿಯ ತಿಳಿಸಿದರು
ಒಮ್ಮೊಮ್ಮೆ ತಾಯಿಯಾಗಿ ಕರುಣೆಯ ಹೃದಯ ಆವರಿಸಿದರು ಒಮ್ಮೊಮ್ಮೆ ಸಂಬಂಧಿಯಾಗಿ ನಮ್ಮೆಲ್ಲಾ ಕಷ್ಟಕ್ಕೆ ಹೆಗಲಾದರು ಒಮ್ಮೊಮ್ಮೆ ಗೆಳೆಯನಾಗಿ ಸದಾ ಜೊತೆಗಿದ್ದು ಬೆಂಬಲಿಸಿದರು
ಜ್ಞಾನ ದೇಗುಲದ ಜ್ಞಾನ ಭಂಡಾರದ ಗಣಿಯಾದ ಶ್ರೇಷ್ಠರು

ಶಿಕ್ಷಕರು ಶಿವ ಸ್ವರೂಪಿಯ ತದ್ರೂಪದಂತೆ
ಗುರುಗಳು ಬ್ರಹ್ಮ ವಿಷ್ಣು ಮಹೇಶ್ವರನಂತೆ
ಮಾಜಿ ಎಂಬ ಪದ ಇರದ ಏಕೈಕ ವೃತ್ತಿಯಂತೆ
ಶಾಲೆಯೇ ಕುಟುಂಬವೆಂದು ಬದುಕಿದ ನಿಸ್ವಾರ್ಥಿಯಂತೆ
ಇಡೀ ಮನುಕುಲದ ಜ್ಞಾನಕ್ಕೆ ರೂವಾರಿಯಂತೆ

-ಶ್ರೀ ಮುತ್ತು ಯ. ವಡ್ಡರ ,ಶಿಕ್ಷಕರು
ಬಾಗಲಕೋಟೆ, 9845568484

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ