ಪಾವಗಡ :ಶಿಕ್ಷಕರ ಸೇವೆ ಅಮೂಲ್ಯವಾದದ್ದು, ಎಷ್ಟೇ ದೊಡ್ಡ ವ್ಯಕ್ತಿಯಾದರೂ ದೊಡ್ಡ ಸ್ಥಾನಕ್ಕೆ ಹೋಗಬೇಕಾದರೆ ಶಿಕ್ಷಕರು ಕಳಿಸಿದ ಅಕ್ಷರ,ಶಿಸ್ತಿನಿಂದ ಮಾತ್ರ ಇದೆಲ್ಲಕ್ಕೂ ಮಿಗಿಲಾಗಿ ನಾವೆಲ್ಲರೂ ಶಿಕ್ಷಕರಿಗೆ ಚಿರ ಋಣಿಯಾಗಿ ಇದ್ದೇವೆ ಎಂದು ಪಾವಗಡ ಪುರಸಭೆ ಅಧ್ಯಕ್ಷ ಪಿ. ಎಚ್ ರಾಜೇಶ್ ತಿಳಿಸಿದರು.
ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣ ರವರ 137 ಜಯಂತಿ ಮತ್ತು ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತವಿಕ ಭಾಷಣ ಉದ್ದೇಶಿಸಿ. ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಆದರ್ಶಗಳನ್ನು, ತತ್ವಗಳನ್ನು ಶಿಕ್ಷಕರು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂದು ತಿಳಿಸಿದರು.
ಪ್ರದಾನ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ಸಂಶೋಧಕರಾದ ಪೂಜಾರಿ ಚಿತ್ತಯ್ಯ ವಿದ್ಯಾರ್ಥಿಗಳು ಕೇವಲ ಅತೀ ಹೆಚ್ಚು ಅಂಕಗಳಿಸುವುದು,ಸರ್ಕಾರಿ ನೌಕರಿ ಪಡೆಯುವುದು ಮಾತ್ರವಲ್ಲದೆ ತಮ್ಮ ಮುಂದಿನ ಪೀಳಿಗೆಗೆ ಅವಶ್ಯಕವಾದ ಉದ್ಯೋಗ ಸೃಷ್ಟಿಗೆ ಒತ್ತನ್ನು ನೀಡಿದಾಗ ಒಳ್ಕೆಯ ಪ್ರಜೆಯಾಗಲು ಸಾಧ್ಯ ಇಂತಹ ಬಹಳಷ್ಟು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶನ ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಜಾನಪದ ಕಳತಂಡ ಗಳೊಂದಿಗೆ, ಬೃಹತ್ ಮೆರವಣಿಗೆ ಏರ್ಪಡಿಸಲಾಗಿತ್ತು.
ನಿವೃತ್ತ ಶಿಕ್ಷಕರಿಗೆ ಶಾಲು ಹೊದಿಸಿ,ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿದ ಶಿಕ್ಷಕರಿಗೆ ಟ್ರೋಫಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷರಾದ ಗೀತಾ ಹನುಮಂತರಾಯಪ್ಪ, ತಹಸೀಲ್ದಾರ್ ವರದರಾಜ್, ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್, ಎಸ್ ಎಸ್ ಕೆ ಸಂಘದ ಅಧ್ಯಕ್ಷರಾದ ಆನಂದರಾವ್, ರೈತ ಸಂಘದ ನಾಗಭೂಷಣರೆಡ್ಡಿ,ಶಿಕ್ಷಕರ ಸಂಘದ ಪದಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕ ವೃಂದದವರು ಹಾಜರಿದ್ದರು.
ವರದಿ-ಮಾರುತಿ ಮುರಳಿ