ಪಾವಗಡ : ಶಿಕ್ಷಕರ ದಿನಾಚರಣೆಯಂದು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆಯನ್ನು ನಡೆಸಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ದೇಶದಾದ್ಯಂತ ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞ,
ಸರ್ವೆಪಲ್ಲಿ ರಾಧಾಕೃಷ್ಣನ್ ರವರ 137ನೇ ಜಯಂತಿ ಆಚರಿಸುತ್ತಿದ್ದು , ಕೆಲ ಶಾಲೆಗಳು ಮಾತ್ರ ಶಾಲೆಗೆ ರಜೆ ಬಿಡದೆ ಖಾಸಗಿ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಗೆ ಬರದಂತೆ ಮಾಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶಿಕ್ಷಕರ ದಿನಾಚರಣೆಯಂದು ತಾಲ್ಲೂಕಿನ ಖಾಸಗಿ ಶಾಲೆಗಳು ದರ್ಬಾರ್ ನಡೆಸುತ್ತಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಕರ ದಿನಾಚರಣೆ ಹಿನ್ನೆಲೆ ಬುಧವಾರವೇ ಎಲ್ಲಾ ಶಾಲೆಗಳಿಗೂ ಆಹ್ವಾನ ಪತ್ರಿಕೆ ನೀಡಿ, ಗುರುವಾರ ಶಿಕ್ಷಣ ದಿನಾಚರಣೆ ಪ್ರಯುಕ್ತ ಶಾಲೆಗಳಿಗೆ ರಜೆ ಘೋಷಿಸಿ ಸರ್ಕಾರಿ ಅನುದಾನಿತ ಖಾಸಗಿಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಕಡ್ಡಾಯವಾಗಿ ಎಸ್ ಎಸ್ ಕೆ ರಂಗ ಮಂದಿರಕ್ಕೆ ಹಾಜರಾಗುವಂತೆ ಆದೇಶ ಮಾಡಿದ್ದರು.
ಆದರೆ ಇದಕ್ಕೆ ವಿಭಿನ್ನವಾಗಿ ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಬಿಇಓ ಆದೇಶಕ್ಕೆ ಸೆಡ್ಡು ಹೊಡೆದು ಶಾಲೆಗಳನ್ನು ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಖಾಸಗಿ ಶಾಲೆಗಳ ಈ ನಡೆಯಿಂದಾಗಿ ಖಾಸಗಿ ಶಾಲೆಗಳ ನಿಯಂತ್ರಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿಯಂತ್ರಣದಲ್ಲಿ ಇವೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.?
ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಒಂದು ನಿಯಮ ಖಾಸಗಿ ಶಾಲೆಗಳಿಗೆ ಒಂದು ನಿಯಮವಿದೆಯೇ ಎಂಬುದು ಚರ್ಚೆಯ ಅಂಶವಾಗಿದೆ.
ತಾಲ್ಲೂಕಿನ ಕೆಲ ಖಾಸಗಿ ಶಾಲೆಗಳು ದೈಹಿಕ ಶಿಕ್ಷಣದ ಬಗ್ಗೆ ನಿರ್ಲಕ್ಷ ತೋರಿ ಶನಿವಾರ ಪೂರ್ಣ ತರಗತಿಗಳನ್ನು ನಡೆಸುತ್ತಿರುವುದು ಈ ಹಿಂದೆ ಕೆಲ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಈಗಲೂ ಸಹ ಕೆಲ ಶಾಲೆಗಳು ಶನಿವಾರ ಪೂರ್ಣ ಪ್ರಮಾಣದ ಶಾಲೆಗಳನ್ನು ನಡೆಸುತ್ತಿದ್ದು, ತಾಲ್ಲೂಕಿನಲ್ಲಿ
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಂಗೂ ಲಗಾಮಿ ಇಲ್ಲವೇ ಎಂಬುದು ಚರ್ಚೆಯ ಅಂಶವಾಗಿದೆ.
ಈಗಲಾದರೂ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಗಮನಹರಿಸಿ ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.