ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಕೆಲ ಆಹಾರ ತಯಾರಿಕೆ ಕೇಂದ್ರಗಳಿಗೆ ಆಹಾರ ಸುರಕ್ಷತಾ ಅಧಿಕಾರಿ ಉದಯಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಬಣ್ಣಗಳ ಮಿಶ್ರಿತ ಆಹಾರ ಪದಾರ್ಥಗಳ ಸೇವನೆಯಿಂದ ಜನರ ಅಂಗಾಂಗಗಳ ನಾಶವಾಗಲಿವೆ ಎಂದು ಅವರು ವಿವರಿಸಿದರು.ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದಾಗಿ ಆರೋಗ್ಯದ ಮೇಲೆ ಗಂಭೀರವಾಗಿ ದುಷ್ಪರಿಣಾಮ ಬೀರುತ್ತಿದ್ದು, ಸಾರ್ವಜನಿಕರು ಆರೋಗ್ಯ ಹಿತ ದೃಷ್ಟಿಯಿಂದ ಹಾನಿಕಾರಕ ಆಹಾರ ಸೇವನೆ ನಿಷೇಧಿಸುವುದು ಕ್ಷೇಮ ಎಂದರು.
ಪಟ್ಟಣದ ಹಲವೆಡೆಗಳಲ್ಲಿನ ಆಹಾರ ತಯಾರಿಸುವ ಅಂಗಡಿಗಳನ್ನ ಖುದ್ದು ಪರಿಶೀಲಿಸಿದರು, ಮತ್ತು ತಿಂಡಿ, ತಿನಿಸುಗಳಲ್ಲಿ ಟೆಸ್ಟಿಂಗ್ ಪೌಡರ್ ಹಾಗೂ ಕೃತಕ ಬಣ್ಣಗಳನ್ನು ಹಾಕಿ ಆಹಾರ ತಯಾರಿಸುತ್ತಿರುವುದು ಕಂಡು ಅವರೇ ದಂಗಾದರು.
ಅಂಗಡಿಯವರಿಗೆ ಅಂತಿಮ ಎಚ್ಚರಿಕೆ ನೀಡಿದ ಅವರು ಅಂಗಡಿ ಮಾಲೀಕರಿಗೆ ಜಾಗ್ರತೆ ಮೂಡಿಸಿದರು, ರಾಸಾಯನಿಕ ಮಿಶ್ರಿತ ಆಹಾರ ಸೇವನೆಯಿಂದ ಕಿಡ್ನಿ ವೈಫಲ್ಯ ಸೇರಿದಂತೆ ಕ್ಯಾನ್ಸರ್ ರೋಗಗಳಂತಹ ಗಂಭೀರವಾದ ಖಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ತಿಳಿಸಿದರು.
ಆಹಾರ ತಯಾರಿಕೆಯಲ್ಲಿ ರಾಸಾಯನಿಕ ಬಳಸುವುದು ಅಕ್ಷಮ್ಯ ಅಫರಾದ ವಾಗಿದ್ದು ಇದು ಅಂತಿಮ ಎಚ್ಚರಿಕೆಯಾಗದೆ ಪುನರಾರ್ವತೆಯಾದರೆ ಶಿಕ್ಷೆ ಗ್ಯಾರಂಟಿ ಎಂದು ಅಂಗಡಿಯವರಿಗೆ ಖಡಕ್ಕಾಗಿ ಎಚ್ಚರಿಸಿದರು. ತಯಾರಿಸಿದ ಆಹಾರವನ್ನು ಬಯಲಿಗೆ ತೆರೆದಿಡಬಾರದು ಅದು ಹಲವು ಬಗೆಯ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಲಿದೆ ಆದ್ದರಿಂದ ಆಹಾರ ತಯಾರಿಸುವಾಗ ಸ್ವಚ್ಚತೆ ಹಾಗೂ ಜಾಗ್ರತೆ ವಹಿಸಬೇಕಿದೆ.
ಎಲ್ಲಾ ಅಂಗಡಿಗಳವರು ಆಹಾರ ಸುರಕ್ಷತೆಗೆ ಹೆಚ್ಚು ಆಧ್ಯತೆ ನೀಡಬೇಕಿದೆ ಎಂದು ಸೂಚಿಸಿದರು.
ತಾವು ಪರಿಶೀಲಿಸಿದ ಆಹಾರದ ಅಂಗಡಿಗಳಲ್ಲಿ ಕೆಲ ಅಂಗಡಿಗಳಲ್ಲಿನ ಆಹಾರ ಮಾದರಿಯನ್ನು ಸಂಗ್ರಹಿಸಿಕೊಂಡರು,ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಲಾಗುವುದೆಂದರು.
ಗಂಭೀರವಾದ ಹಾನಿಕಾರಕ ರಾಸಾಯನಿಕ ಅಂಶ ಆಹಾರದಲ್ಲಿ ಕಂಡು ಬಂದಲ್ಲಿ, ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ಅವರು ಪಟ್ಟಣದ ಕೆಲವೆಡೆಗಳಲ್ಲಿನ ಚಿಕನ್, ಎಗ್ ರೈಸ್ ಹಾಗೂ ಗೋಬಿ ಮಂಚೂರಿ ಅಂಗಡಿಗಳಿಗೆ ತೆರಳಿ ಪರಿಶೀಲಿಸಿದರು.
ಆಹಾರದ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಮಾಧ್ಯಮದ ಮುಖಾಂತರ ಜಾಗ್ರತೆ ಮೂಡಿಸುವಂತೆ ವರದಿಗಾರರಲ್ಲಿ ಉದಯ ಕುಮಾರ ಮನವಿ ಮಾಡಿದರು ಹಾಗೂ ಆರೋಗ್ಯಕ್ಕೆ ಸುರಕ್ಷಿತವಾದ ಆಹಾರ ಬಳಕೆ ಮಾಡಬಹುದಾದ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದರು.
ಸಾರ್ವಜನಿಕರು ಆರೋಗ್ಯ ಸುರಕ್ಷತೆಗಾಗಿ ಆಹಾರ ಸೇವನೆ ಸಂದರ್ಭದಲ್ಲಿ ತುಂಬಾ ಎಚ್ಚೆತ್ತುಕೊಂಡು ಸೇವಿಸಬೇಕಾಗಿದೆ ಎಂದು ಅವರು ಮಾಧ್ಯಮದ ಮುಖಾಂತರ ಸಾರ್ವಜನಿಕರಲ್ಲಿ ಕೋರಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.